

ಬೇಲೂರು: ತಾಲೂಕಿನ ನಾರ್ವೆ ಪೇಟೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗ್ರಾಮ ಪಂಚಾಯತಿ ಮಟ್ಟದ ಪ್ರಗತಿ ಪರಿಶೀಲನಾ ಸಭೆಯನ್ನು ಅಧ್ಯಕ್ಷೆ ಬೇಬಿ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮದಂತೆ ವಿವಿಧ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಭಾಗವಹಿಸಿ ಮುಂದಿನ 5 ವ?ರ್ದ ಅಭಿವೃದ್ಧಿ ಬಗ್ಗೆ ದೂರ ದೃಷ್ಟಿ ಯೋಜನೆಯ ಮಾಹಿತಿ ನೀಡಿದ್ದಲ್ಲದೆ, ಆಯಾ ಇಲಾಖೆಯ ಸಮಸ್ಯೆಗಳ ಬಗ್ಗೆ ವಿವರಣೆಯನ್ನು ಸಭೆಗೆ ತಿಳಿಸಿದರು. ನಂತರ ಅಧ್ಯಕ್ಷರು ಮತ್ತು ಸದಸ್ಯರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಗಬೇಕಿರುವ ಕೆಲಸ ಕಾರ್ಯಗಳು ಮತ್ತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಶೀಘ್ರವಾಗಿ ಜಾರಿಗೆ ತರುವಂತೆ ತಿಳಿಸಿದರು.
ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಬೇಬಿ, ಉಪಾಧ್ಯಕ್ಷ. ಮಲ್ಲಿಕಾರ್ಜುನ ನಾರ್ವೆ. ಸದಸ್ಯರಾದ ಚಿದಾನಂದ. ಮಾಲಾಶ್ರೀ. ಪವಿತ್ರ. ಮಲ್ಲಿಕಾರ್ಜು ಸುಲಗಳಲೆ. ವೀಣಾ. ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ನಿಕಿತಾ ಥಾಮಸ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ಚಂದ್ರಯ್ಯ, ಕಾರ್ಯದರ್ಶಿ. ಚಾಮರಾಜ್, ಶಿಕ್ಷಕರಾದ ಸುರೇಶ್, ಸೈಯದ್ ಖಾಲಿಲ್. ಲಕ್ಷ್ಮಿ ನಾರಾಯಣ. ಎಸ್‌ಡಿಎಂಸಿ ಅಧ್ಯಕ್ಷೆ ಸುನೀತಾ. ಆಶಾ, ಅಂಗನವಾಡಿ ಕಾರ್ಯಕರ್ತರು ಹಾಗೂ ಗ್ರಾಪಂ ಸಿಬ್ಬಂದಿ ಇದ್ದರು.