

ಬೈಲಹೊಂಗಲ: ಪಟ್ಟಣದ ದಿ. ಬೆಲಹೊಂಗಲ ಅರ್ಬನ್
ಕೋ&ಆಪ್ ಬ್ಯಾಂಕ್ 2024&25ರ ವರ್ಷದ ಮಾರ್ಚ್
31ಕ್ಕೆ 7.30 ಕೋಟಿ ರೂ. ಲಾಭಗಳಿಸಿ ಅಭಿವೃದಿಟಛಿಯತ್ತ
ಸಾಗಿದೆ ಎಂದು ಬ್ಯಾಂಕ್ ಅಧ್ಯ ಡಾ.ಬಿ.ಎಚ್.ಮೆಟಗುಡ್ಡ
ಹೇಳಿದರು. ಪಟ್ಟಣದ ಬ್ಯಾಂಕಿನ ಕಚೇರಿಯಲ್ಲಿ
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,
ತಂದೆ, ಮಾಜಿ ಶಾಸಕ ದಿ. ಎಚ್.ಎಸ್. ಮೆಟಗುಡ್ಡ
ಬೆಳೆಸಿದ ಸಂಸ್ಥೆಯನ್ನು ಮುನ್ನಡೆಸುತ್ತಿರುವುದು
ಹೆಮ್ಮೆ ಎನಿಸುತ್ತಿದೆ. ಸಹಕಾರಿಯ ಮಾಜಿ
ಅಧ್ಯ ದಿ.ಎಂ.ಸಿ.ಮೆಟಗುಡ್ಡ 50 ವರ್ಷ
ನಿರ್ದೇಶಕ, ಚೇರ್ಮನರಾಗಿ ಸಹಕಾರಿಯನ್ನು
ಉತ್ತುಂಗಕ್ಕೇರಿಸಿದ್ದಾರೆ. ಹಿರಿಯರ
ಮಾರ್ಗದರ್ಶನದಲ್ಲಿ ಆಡಳಿತ ಮಂಡಳಿ
ಸಹಕಾರದಲ್ಲಿ ಬ್ಯಾಂಕ್ ಅಭಿವೃದಿಟಛಿಯಾಗುತ್ತಿದೆ
ಎಂದರು. ಆಡಳಿತ ಮಂಡಳಿ, ಸಿಬ್ಬಂದಿಯ
ಪರಿಶ್ರಮದಿಂದ ಪ್ರಾರಂಭದಿಂದಲೂ ಬ್ಯಾಂಕ್ ಗ್ರಾಹಕರ
ಪ್ರಶಂಸೆಗೆ ಪಾತ್ರವಾಗಿದೆ. ಬೆಳಗಾವಿಯಲ್ಲಿ 3, ಹುಬ್ಬಳ್ಳಿ,
ರಾಣೆಬೆನ್ನೂರ, ಗದಗ, ಬೈಲಹೊಂಗಲ, ಧಾರವಾಡ
ಸೇರಿ ಒಟ್ಟು 9 ಶಾಖೆಗಳ ಮೂಲಕ ಸಹಕಾರಿಯು ಸೇವೆ
ನೀಡುತ್ತಿದೆ. ಸದಸ್ಯರಿಗೆ ಪ್ರತಿ ವರ್ಷ ಷೇರು ಮೊತ್ತಕ್ಕೆ ಶೇ.11
ಲಾಭಾಂಶ ನೀಡಲಾಗುತ್ತಿದೆ. ಶ್ರೀ ಸಹಕಾರಿಯಿಂದ
ಮೊಬೆಲ್ ಬ್ಯಾಂಕಿಂಗ್ ಸೌಲಭ್ಯ
ಒದಗಿಸಲಾಗುವುದು. 6.96 ಕೋಟಿ ರೂ.
ಷೇರು ಬಂಡವಾಳ, 41.05 ಕೋಟಿ ರೂ.
ನಿಧಿ ಸಂಗ್ರಹಿಸಿದೆ. ಗ್ರಾಹಕರಿಂದ 420 ಕೋಟಿ
ರೂ. ಠೇವು ಕ್ರೋಡಿಕರಿಸಿ, 279 ಕೋಟಿ
ರೂ. ವಿವಿಧ ರೀತಿಯ ಸಾಲ ನೀಡಿದೆ. ಜನತ ೆ
ವ್ಯಾಪಾರ, ಮನೆ ನಿರ್ಮಾಣ, ವಾಹನ ಖರೀದಿ,
ಕಷಿ, ಸಣ್ಣ ಕೆಗಾರಿಕೆ, ಕರಕುಶಲ ಸೇರಿ ಅನೇಕ
ವ್ಯಾಪಾರ ವಹಿವಾಟಿಗೆ ಹಣಕಾಸಿನ ನೆರವು
ಪಡೆಯಬಹುದು. ಸಹಕಾರಿಯ ಸಿಆರ್
ಎಆರ್ ಶೇ 13.56 ಪ್ರತಿಶತ ಇದ್ದು, 477
ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಲ್ಲ ನಿರ್ದೇಶಕರು, ಸಿಬ್ಬಂದಿ ಇದ್ದರು.