

ಬೋರಗಾಂವ: ಅಂಕಲಿ ಗಾಮದ ಡಾ.ಪ್ರಭಾಕರ ಕೋರೆ ಕೋ-ಆಪ್ ಕ್ರೆಡಿಟ್ ಸೊಸೈಟಿ (ಬಹು ರಾಜ್ಯ)ಯ ನಿಪ್ಪಾಣಿ ತಾಲೂಕಿನ ಗಳತಗಾ ಶಾಖೆ ಸೋಮವಾರ 8ನೇ ವಾರ್ಷಿಕೋತ್ಸವ ಆಚರಿಸಿಕೊಂಡಿತು.
ಶಾಖೆಯ ಅಧ್ಯಕ್ಷ ಮಿಥುನ ಪಾಟೀಲ ಮಾತನಾಡಿ, ಡಾ.ಪ್ರಭಾಕರ ಕೋರೆ ಮಾರ್ಗದರ್ಶನದಲ್ಲಿ ಸೊಸೈಟಿ ಬಹುರಾಜ್ಯ ಕಾಯ್ದೆಯಡಿ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಗೂ ಸೇವೆ ವಿಸ್ತರಿಸಲಿದೆ. ಶಾಖೆ 8.53 ಕೋಟಿ ರೂ.ಗೂ ಅಕ ಠೇವಣಿ ಸಂಗ್ರಹಿಸಿದೆ. ಸದಸ್ಯರಿಗೆ 2.03 ಕೋಟಿ ರೂ. ಸಾಲ ನೀಡಿದೆ. 15.99 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಶಾಖೆ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದೆ ಎಂದರು.
ಗಳತಗಾ ಗ್ರಾಪಂ ಅಧ್ಯಕ್ಷ ಅಲಗೌಡ ಪಾಟೀಲ, ಶಾಖೆ ನಿರ್ದೇಶಕರಾದ ಡಾ.ರಮೇಶ ಮಗದುಮ್ಮ, ರವೀಂದ್ರ ರೂಗೆ, ಭೀಮಗೌಡ ಪಾಟೀಲ, ಶಿವಾನಂದ ಪಾಟೀಲ, ಪ್ರಧಾನ ವ್ಯವಸ್ಥಾಪಕ ದೇವೇಂದ್ರ ಕರೋಶಿ, ಶಾಖಾ ವ್ಯವಸ್ಥಾಪಕ ವಿಜಯ ಅವರನಾಳೆ ಇತರರಿದ್ದರು.