ಪ್ರಗತಿ ಪಥದತ್ತ ಮಲ್ಲಮ್ಮ ಅರ್ಬನ್ ಸಹಕಾರಿ

14-88
ವೀರ ರಾಣಿ ಮಲ್ಲಮ್ಮ ಸಹಕಾರಿಯ ವಾರ್ಷಿಕ ಮಹಾಸಭೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ, ಬಹುಮಾನವನ್ನು ವಿತರಿಸಲಾಯಿತು. ಸಂಸ್ಥಾಪಕ ಅಧ್ಯಕ್ಷ ಡಾ. ಆರ್.ಬಿ. ಪಾಟೀಲ, ಎನ್.ಎಂ. ಕರೀಕಟ್ಟಿ, ಅರ್.ಎಸ್.ರೊಟ್ಟಯ್ಯನವರ ಇತರರು ಇದ್ದರು.
Published on

ಬೈಲಹೊಂಗಲ, ಬೆಳಗಾವಿ: ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದ ವೀರ ರಾಣಿ ಮಲ್ಲಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿಯು ಆಡಳಿತ ಮಂಡಳಿ, ಸದಸ್ಯರ, ಸಿಬ್ಬಂದಿ ಸಹಕಾರದಿಂದ ಗ್ರಾಮೀಣ ಭಾಗದ ಜನತೆಗೆ ಆರ್ಥಿಕತೆಯ ಕೊರತೆ ನೀಗಿಸುತ್ತ 46.47 ಲಕ್ಷ ರೂ. ಲಾಭ ಗಳಿಸಿ, ಪ್ರಗತಿ ಪಥದತ್ತ ಸಾಗಿದೆ ಎಂದು ಸಹಕಾರಿಯ ಸಂಸ್ಥಾಪಕ ಅಧ್ಯಕ್ಷ ಡಾ. ಆರ್.ಬಿ. ಪಾಟೀಲ ಹೇಳಿದರು.

ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದ ಮಲ್ಲಮ್ಮ ಶ್ರೇಷ್ಠ ಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ 30ನೇ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಸಹಕಾರಿಯು 11,482 ಸದಸ್ಯರನ್ನು ಹೊಂದಿ 72.91 ಲಕ್ಷ ರೂ. ಷೇರು ಹಣ, 3.57 ಕೋಟಿ ರೂ. ನಿಧಿಗಳನ್ನು, 52.60 ಕೋಟಿ ರೂ. ಠೇವು, 29.02 ರೂ. ಕೋಟಿ ಸಾಲ ವಿತರಿಸಿದ್ದು, 17.16 ಕೋಟಿ ರೂ. ಹಣ, 60 ಕೋಟಿ ರೂ. ದುಡಿಯುವ ಬಂಡವಾಳದೊಂದಿಗೆ, 206 ಕೋಟಿ ರೂ. ವಾರ್ಷಿಕ ವ್ಯವಹಾರ ನಡೆಸಿದೆ. ಶೇ. 91.04 ಸಾಲ ವಸೂಲಾತಿ ಮಾಡಲಾಗಿದೆ. ಶೇ.12 ಡಿವಿಡೆಂಡ್ ನೀಡಲು ತೀರ್ಮಾನಿಸಲಾಗಿದೆ ಎಂದರು.

ಖಾಸ್ಗತೇಶ್ವರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾಶೀನಾಥ ಬಿರಾದರ ಮಾತನಾಡಿ, ಬ್ಯಾಂಕು ಶಿಕ್ಷಣ ಸಂಸ್ಥೆಗಳಿಗೂ ಆರ್ಥಿಕತೆ ಒದಗಿಸುತ್ತಾ ಶಿಕ್ಷಣದ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು.

ಸಹಕಾರಿಯ ಸದಸ್ಯರು, ಈಶಪ್ರಭು ಶಿಕ್ಷಣ ಸಂಸ್ಥೆಯಲ್ಲಿ, ಮಹೇಶ ಪಾಟೀಲ ಸರ್ಕಾರಿ ಪ್ರೌಢ ಶಾಲೆಯ ಎಸ್‌ಎಸ್‌ಎಲ್‌ಸಿ, ಪಿಯುಸಿಯ ಪ್ರತಿಭಾನ್ವಿತರಿಗೆ ಪ್ರಶಸ್ತಿ ಪತ್ರ, ಬಹುಮಾನವನ್ನು ವಿತರಿಸಲಾಯಿತು. ಅಪಘಾತದಲ್ಲಿ ಮರಣ ಹೊಂದಿದ ಸದಸ್ಯ ಪತ್ರಪ್ಪ ಗಾಣಿಗೇರ ವಾರಸುದಾರರಿಗೆ 1ಲಕ್ಷ ರೂ.ವಿಮಾ ಪರಿಹಾರ ವಿತರಿಸಲಾಯಿತು.
ವಿ.ಎಸ್. ಬಳಿಗಾರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎನ್.ಎಂ.ಕರೀಕಟ್ಟಿ, ನಿರ್ದೇಶಕರಾದ ಅರ್.ಎಸ್.ರೊಟ್ಟಯ್ಯನವರ, ಎಸ್.ಎನ್. ಕುಲಕರ್ಣಿ, ಬಿ.ಆರ್. ಪಾಟೀಲ, ಆರ್.ಜೆ. ನಲವಡೆ, ಬಿ.ವಿ. ಬಳಿಗಾರ, ಬಿ.ಎಸ್. ಪುಜೇರ, ಎನ್.ವಿ. ಕಮ್ಮಾರ, ಐ.ಎಂ.ಯಲಮೇತ್ರಿ, ಎಫ್.ಕೆ. ಮೇದಾರ, ಪಿ.ಜಿ.ಬಳಿಗಾರ, ಎಂ.ಜಿ. ಹಳ್ಳದಕೇರಿ, ಎಂ.ಜಿ. ಹೀರೆಮಠ, ಸಿ.ವೈ.ಪಾಟೀಲ, ವಿ.ಜಿ. ಗಡತರನವರ, ಎಂ.ಬಿ. ಹಿರೇಮಠ, ಶಿವಾನಂದ ಬೆಟಗೇರಿ, ಉಮೇಶ ಮಾಡಿಕ, ಪ್ರಧಾನ ವ್ಯವಸ್ಥಾಪಕ ಎಸ್.ಬಿ. ಹುಡೇದ, ಶಾಖಾ ವ್ಯವಸ್ಥಾಪಕ ಎಂ.ಕೆ. ಕುಂಬಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net