

ಕಲಬುರಗಿ: ಖ್ಯಾತ ಚಿಂತಕ ಕೆ.ಎನ್. ಗೋವಿಂದಾಚಾರ್ಯರ ಕನಸು ನನಸು ಮಾಡುವಲ್ಲಿ ಟ್ರಸ್ಟ್ ಸದಸ್ಯರು ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದು ಮಾನವ ಸಂಪನ್ಮೂಲ ಕೃಷಿ ಮತ್ತು ಸಂಸ್ಕೃತಿ ಸಂಘದ ಅಧ್ಯಕ್ಷ ಡಾ. ಬಸವರಾಜ ಪಾಟೀಲ್ ಸೇಡಂ ಹೇಳಿದರು.
ನಗರದಲ್ಲಿ ಖ್ಯಾತ ಚಿಂತಕ ಕೆ.ಎನ್. ಗೋವಿಂದಾಚಾರ್ಯ ಪ್ರೇರಿತ ಕಲ್ಯಾಣ ಕರ್ನಾಟಕ ಪ್ರಕೃತಿ ಕೇಂದ್ರಿತ ಟ್ರಸ್ಟ್ ಉದ್ಘಾಟಿಸಿದ ಅವರು, ಪ್ರಕೃತಿಯೊಂದಿಗೆ ಹೊಂದಿಕೊಂಡು ಬದುಕಿದರೆ ಮಾನವ ಶಕ್ತಿ ಅಭಿವೃದ್ಧಿಯಾಗುತ್ತದೆ. ಕಲ್ಯಾಣ ಕರ್ನಾಟಕದ 6 ಜಿಲ್ಲೆಗಳ ವ್ಯಾಪ್ತಿಯಲ್ಲಿ ಕೃಷಿ, ಕುರಿ ಸಾಕಾಣಿಕೆ, ತೋಟಗಾರಿಕೆ ಮುಂತಾದ ಚಟುವಟಿಕೆಗಳ ಮುಖಾಂತರ ರೈತರು ಅಭಿವೃದ್ಧಿ ಹೊಂದಬೇಕು ಎಂಬ ಉದ್ದೇಶದಿಂದ ಈ ಟ್ರಸ್ಟ್ ಆರಂಭಿಸಲಾಗಿದೆ. ಬರುವ ದಿನಗಳಲ್ಲಿ ಟ್ರಸ್ಟ್ ಮುಖಾಂತರ ಸಹಸ್ರಾರು ರೈತರು ಮಾರ್ಗದರ್ಶನ ಪಡೆದು, ಅಭಿವೃದ್ಧಿ ಸಾಧಿಸುವಂತಾಗಬೇಕು ಎಂದು ಹೇಳಿದರು.
ಈಶಾನ್ಯ ವಲಯ ಶಿಕ್ಷಕರ ವೇದಿಕೆ ಅಧ್ಯಕ್ಷ ಎಂ.ಬಿ. ಅಂಬಲಗಿ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ವೀರೇಂದ್ರ ಪಾಟೀಲ್ ಕುಮಸಿ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಇಂಜಿನಿಯರ್ ಚನ್ನವೀರಪ್ಪ ಗುಡ್ಡಾ, ಮಹೇಶ ಸಣ್ಣಮನಿ, ಡಾ. ರಾಜೇಂದ್ರ ಯರನಾಳೆ, ಮೃತ್ಯುಂಜಯ ಪ್ರಸಾದ ಪತಂಗಿ, ಪ್ರಮೋದ ನಾಗೂರ, ಕೃಷ್ಣಭಟ್ಟ ಜೋಷಿ, ಬಸವರಾಜ ರಾಜಾಪುರ, ಸೂರ್ಯಕಾಂತ ಜೀವಣಗಿ, ಎಚ್.ಸಿ. ಪಾಟೀಲ್ ಇದ್ದರು.
ಟ್ರಸ್ಟ್ನ ಕಾರ್ಯದರ್ಶಿ ಗುರುಪ್ರಸಾದ ಅಂಬಲಗಿ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಶ್ರೀನಿವಾಸ ಕುಲಕಣರ್ಿ ಇಟಗಿ ವಂದಿಸಿದರು. ಖಜಾಂಚಿ ಅನಿಕೇತನ ಮಠ ನಿರೂಪಣೆ ಮಾಡಿದರು.