

ಚಿತ್ರದುರ್ಗ: ನಮಗೆ ಪರಿಶುದ್ಧ ಆಮ್ಲಜನಕ ನೀಡುವಂಥ ಪ್ರಕೃತಿಯನ್ನು ನಾಶ ಮಾಡುವುದು ಅನ್ನ ಹಾಕಿದ ಮನೆಗೆ ಕನ್ನ ಹಾಕಿದಂತೆ ಎಂದು ಯೋ ಗ ಗುರು ಚೆನ್ನಬಸವಣ್ಣ ಹೇಳಿದರು. ಶರಣ ಸಂಸ್ಕೃತಿ ಅಂಗವಾಗಿ ಮುರುಘಾಮಠದಲ್ಲಿ ಸೋಮವಾರ ಆಯೋಜಿಸಿದ್ದ 3ನೇ ದಿನದ ಯೋಗ ಪ್ರಾತ್ಯಕ್ಷೆಯಲ್ಲಿ ಮಾತನಾಡಿ,ತನುವ ಹಿಡಿದಿರುವುದು ಪ್ರಕೃತಿಯ ರಕ್ಷಣೆ ನಿಟ್ಟಿನಲ್ಲಿ ನಾವೆಲ್ಲರೂ ಜಾಗೃತರಾಗೋಣ ಎಂದರು.
ಯೋಗಗುರು ಚಿನ್ಮಯಾನಂದ ಅವರು ಮಾತನಾಡಿ,ಕಾಯಕವೆಂದರೆ ನಿರಂತರ ಚಲನೆಯಲ್ಲಿರುವುದು. ಈ ಅರಿವು ಸ್ವಯಂ ಜಾಗೃತ ವಾಗಬೇಕಾದರೆ ನಿತ್ಯ 15-20 ನಿಮಿಷ ಶಿವಯೋಗ ಮಾಡಬೇಕು. ಅರಿವಿಗಿಂತ ದೊಡ್ಡದ್ದು ಯಾವುದು ಇಲ್ಲ. ಗಡಿಯಾರ ಸಮಯ ನೊ ೀಡುವ ಸಾಧನವಾದರೆ, ಶಿವಯೋಗ ಜೀವನವನ್ನು ನೋಡುವ ಸಾಧನವಾಗಿದೆ ಎಂದರು. ಸಾನಿಧ್ಯ ವಹಿಸಿದ್ದ ಶ್ರೀ ಮಠದ ಆಡಳಿತ ಮಂ ಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿದರು.ರಾಷ್ಟ್ರೀಯ ಯೋಗ ಕ್ರೀಡಾ ಸಂಸ್ಥೆಯ ಬಿ.ಆರ್.ಪ್ರಸನ್ನಕುಮಾರ್, ಬಸವ ರಾಜಪ್ಪ,ಭಾರತೀ,ಯೋಗಸಾಧಕರು ಇದ್ದರು. ಜಮುರಾ ಕಲಾವಿದರು ವಚನಗೀತೆಗಳನ್ನು ಹಾಡಿದರು.
ಇಷ್ಟಲಿಂಗ ಪೂಜೆ
ಇಷ್ಟಲಿಂಗ ಪೂಜೆ ಬದುಕಿನ ಆನಂದಕ್ಕೆ ಕಾರಣವಾಗಿದೆ ಎಂದು ಶಿರಸಂಗಿ ಶ್ರೀ ಮಹಾಂತ ಸ್ವಾಮೀಜಿ ತಿಳಿಸಿದರು. ಶ್ರೀ ಮಠದಲ್ಲಿ ಸೋಮವಾರ ಏರ್ಪಡಿಸಿದ್ದ ಸಹಜ ಶಿವಯೋಗ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿ,ಶಿವಯೋಗದಿಂದಾಗುವ ಲಾಭಗಳನ್ನು ತಿಳಿ ದುಕೊಳ್ಳುವ ಅವಶ್ಯಕತೆಯಿದೆ ಎಂದರೆ. ಡಾ.ಬಸವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಶರಣೆ ಸತ್ಯಕ್ಕ, ಹರಗುರು ಚರಮೂರ್ತಿ ಗಳು,ರುದ್ರಮೂರ್ತಿ ಇತರರು ಇದ್ದರು. ಉಮೇಶ ಪತ್ತಾರ ವಚನಗೀತೆ ಗಾಯನ ನಡೆಸಿಕೊಟ್ಟರು.
ನಾಳೆ ವಿವಿಧ ಸ್ಪರ್ಧೆಗಳು
ಈ ಬಾರಿಯ ಶರಣಸಂಸ್ಕೃತಿ ಉತ್ಸವದ ಅಂಗವಾಗಿ ಶ್ರೀಮಠದಲ್ಲಿ ಸೆ.24ರಂದು ಬೆಳಗ್ಗೆ 10.30 ಗಂಟೆಗೆ ಸಿರಿಧಾನ್ಯಗಳಿಂದ ತಯಾ ರಿ ಸಿದ ಅಡುಗೆ ಸ್ಪರ್ಧೆ ಏರ್ಪಡಿಸಲಾಗಿದೆ. ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗುವುದು ಎಂದು ಶ್ರೀ ಮ ಠದ ಪ್ರಕಟಣೆ ತಿಳಿಸಿದೆ.
ಬೆಳಗ್ಗೆ 9ಗಂಟೆಗೆ ಶ್ರೀಮಠದ ಅನುಭವ ಮಂಟಪ ಹಾಗೂ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ 5 ರಿಂದ 15 ವರ್ಷ ಹಾಗೂ 16 ವರ್ಷ ಮೇಲ್ಪಟ್ಟವರಿಗೆ ವಚನ ಕಂಠಪಾಠ ಸ್ಪರ್ಧೆ, 12ನೇ ಶತಮಾನದ ಬಸವಾದಿ ಶಿವಶರಣರ ವೇಷಭೂಷಣ ಸ್ಪರ್ಧೆ ಹಾಗೂ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.