

ತುಮಕೂರು: ವಿಷಮುಕ್ತ ಆಹಾರ ಮತ್ತು ಭೂಮಿಯ ಆರೋಗ್ಯ ಸರಿಪಡಿಸಲು ರೈತರು ಸಾವಯವ ಕೃಷಿ ಮಾಡುವ ಅನಿವಾರ್ಯತೆ ಎದುರಾಗಿದ್ದು, ಸಾವಯವ ಕೃಷಿಗೆ ಆದ್ಯತೆ ದೊರಕಬೇಕು. ಇದರಿಂದ ಪ್ರಕೃತಿ ಧರ್ಮ ಉಳಿಸಲು ಸಾಧ್ಯ ಎಂದು ತಿಪಟೂರಿನ ಗುರುಕುಲ ಆಶ್ರಮದ ಮುಮ್ಮಡಿ
ಕರಿಬಸವದೇಶೀಕೇಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ದೊಡ್ಡ ಹೊಸೂರಿನಲ್ಲಿ ಇತ್ತೀಚೆಗೆ ಗಾಂಧಿ ಸಹಜ ಬೇಸಾಯ ಆಶ್ರಮದ ಗಾಂಧಿ ರೈತ ವಿಾನ ಕೇಂದ್ರ&ಜೈವಿಕ ಸಂಪನ್ಮೂಲ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ಸಹಜ ಬೇಸಾಯ, ಸಾವಯವ ಬೇಸಾಯ ಮಾಡುವ ಮೂಲಕ ಪ್ರಕೃತಿಯ ಧರ್ಮವನ್ನು ಉಳಿಸಬೇಕು. ಯಾವುದೇ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸದೆ ಕೃಷಿ ಮಾಡುವುದರ ಜತೆಗೆ ಅವುಗಳನ್ನು ಸರಿಯಾದ ಬೆಲೆಗೆ ಮಾರುವುದನ್ನು ರೈತರು ಕಲಿಯಬೇಕು ಎಂದರು.
ಕೃಷಿ ವಿಾನಿ ಮಂಜುನಾಥ್ ಮಾತನಾಡಿ, ಸಾವಯವ ಕೃಷಿ ಬೆಂಬಲಕ್ಕೆ ಸರ್ಕಾರ ಜಾರಿಗೆ ತರುತ್ತಿರುವ ಯೋಜನೆಗಳು ಕೇವಲ ಜಾಹಿರಾತಿಗೆ ಸೀಮಿತವಾಗಿದ್ದು, ಅರ್ಹ ರೈತ ಫಲಾನುಭವಿಗಳಿಗೆ ಯೋಜನೆ ಲಾಭ ದೊರಕುತ್ತಿಲ್ಲ. ಸರ್ಕಾರ ಸಾವಯವ ಕೃಷಿಕರಿಗೆ ಸರಿಯಾದ ಬೆಂಬಲ ನೀಡಿದಾಗ ಸಾವಯವ ಕೃಷಿಕರ ಸಂಖ್ಯೆ ಹೆಚ್ಚಾಗುತ್ತದೆ ಎಂದು ತಿಳಿಸಿದರು.
ರಾಜ್ಯ ರೈತ ಸಂದ ಜಿಲ್ಲಾಧ್ಯಕ್ಷ ಗೋವಿಂದ ರಾಜು ಮಾತನಾಡಿ, ಕೃಷಿ ೇತ್ರದಲ್ಲಿನ ಸಮಸ್ಯೆಗಳ ಪರಿಹಾರಕ್ಕಾಗಿ ಅನೇಕ ರೈತ ಹೋರಾಟಗಾರರು ನಿರಂತರವಾಗಿ ಹೋರಾಟಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಭೂಮಿಯ ಫಲವತ್ತತೆ, ಭೂಮಿಯ ಸಂರಣೆಯ ಬಗ್ಗೆ ಕಳೆದ 15 ವರ್ಷಗಳಿಂದ ಇತ್ತೀಚಿಗೆ ಹೋರಾಟ ಮಾಡಲಾಗುತ್ತಿದೆ. ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ರೈತರು ಅನಿವಾರ್ಯವಾಗಿ ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಬಳಸುತ್ತಿದ್ದಾರೆ. ಆದರೆ ರಾಜ್ಯವನ್ನು ಸಾವಯವ ರಾಜ್ಯವನ್ನಗಿಸುವ ಜವಾಬ್ದಾರಿ ನಮ್ಮೆಲ್ಲರದಾಗಿದ್ದು, ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿಯ ಮೂಲಕ ಭಾರತ ವಿಶ್ವಗುರುವಾಗಬೇಕು. ಸಹಕಾರ ಮನೋಭಾವದಿಂದ ಸಾವಯವ ಕೃಷಿ ಮಾಡಬೇಕು. ಕಾಯಿಲೆ ಬಂದಾಗ ಸರಿಪಡಿಸಿಕೊಳ್ಳುವುದಕ್ಕಿಂತ ಕಾಯಿಲೆ ಬಾರದಂತೆ ಎಚ್ಚರಿಕೆವಹಿಸುವ ಅನಿವಾರ್ಯತೆ ಇದೆ ಎಂದರು.
ಸವಾಲುಗಳ ಮಧ್ಯೆ : ಜನರಿಗೆ ವಿಷಮುಕ್ತ ಆಹಾರ ದೊರೆಯಬೇಕು. ಭೂಮಿಯ ಮೇಲಿನ ಜೀವ ವೈವಿಧ್ಯತೆ ಕಾಪಾಡಬೇಕು ಎಂಬ ನಿಟ್ಟಿನಲ್ಲಿ ಅನೇಕ ಸವಾಲುಗಳ ನಡುವೆ ಈ ಜೈವಿಕ ಸಂಪನ್ಮೂಲ ಕೇಂದ್ರ ಉದ್ಘಾಟಿಸಲಾಗಿದ್ದು, ಭೂಮಿಯ ಫಲವತ್ತತೆ ಕಾಪಾಡುವ ಜವಾಬ್ದಾರಿ ಮತ್ತು ಅನಿವಾರ್ಯತೆ ನಮ್ಮೆಲ್ಲರ ಮೇಲಿದೆ ಎಂದು ಪರಿಸರವಾದಿ ಸಿ.ವೈ.ಯತಿರಾಜು ತಿಳಿಸಿದರು.