

ಚಿಕ್ಕೋಡಿ: ಪರಿಸರ ನಾಶದಿಂದ ಜಾಗತಿಕ ತಾಪಮಾನದಲ್ಲಿ ಹೆಚ್ಚಳವಾಗುತ್ತಿದೆ. ಆದ್ದರಿಂದ ಎಲ್ಲರೂ ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ ಹೇಳಿದರು.
ತಾಲೂಕಿನ ವಡ್ರಾಳ ಗ್ರಾಮದ ಅಮೃತ ಸರೋವರ ದಡದಲ್ಲಿ ಪರಿಸರ ದಿನಾಚರಣೆ ನಿಮಿತ್ತ ಬುಧವಾರ ಸಸಿ ನೆಟ್ಟು ಮಾತನಾಡಿದರು.
ಶಿವಾನಂದ ಶಿರಗಾಂವಿ, ಎಸ್.ಎಸ್.ಮಠದ, ಸಚಿನ ಹೊನ್ನಮನಿ, ಉಪವಲಯ ಅರಣ್ಯಅಧಿಕಾರಿಗಳಾದ ಎಸ್.ಎಸ್. ಕುಂಬಾರ, ಪಿಡಿಒ ಭರಮಣ್ಣ ಯಾತಗೇರಿ, ಐಇಸಿ ಸಂಯೋಜಕ ರಂಜೀತ ಕಾರ್ಣಿಕ, ಆಡಳಿತ ಸಹಾಯಕ ಅಕ್ಷಯ ಠಕಪ್ಪಗೋಳ ಇತರರಿದ್ದರು.