

ರಾಮನಗರ: ವಿಶ್ವ ಪರಿಸರ ದಿನಾಚರಣೆಯು ಹಸಿರಿನ ಮಹತ್ವವನ್ನು ಜಗತ್ತಿನಲ್ಲೆಡೆ ಸಾರುವ ದಿನವಾಗಿದೆ. ಪರಿಸರ ರಕ್ಷಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೆ, ಪ್ರತಿದಿನವೂ ಪರಿಸರ ಸಂರಕ್ಷಣೆಯ ಕಾಳಜಿ ತೋರಬೇಕು. ಇದಕ್ಕಾಗಿ ಸಮುದಾಯದಲ್ಲಿ ಮನೆಗೊಂದು ಗಿಡ ನೆಡುವಂತೆ ಜಾಗೃತಿ ಮೂಡಿಸಿ ಪ್ರಕೃತಿಯೊಂದಿಗೆ ಸಾಮರ್ಯದ ಬದುಕು ಕಟ್ಟಿಕೊಳ್ಳಬೇಕು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕಿರಣ್ ಶಂಕರ್ ತಿಳಿಸಿದರು.
ನಗರದ ಮಿನಿ ವಿಧಾನಸೌಧ ಆವರಣದಲ್ಲಿ ಪರಿಸರ ದಿನಾಚರಣೆ ನಿಮಿತ್ತ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚನ್ನಪಟ್ಟಣ ರೈಡರ್ ಕ್ಲಬ್, ಹೋಲಿ ಕ್ರೆಸೆಂಟ್ ಆಂಗ್ಲ ಪ್ರೌಢಶಾಲೆ, ವಿವಿಧ ಅಭಿವೃದ್ಧಿ ಇಲಾಖೆಗಳು ಹಾಗೂ ಸ್ವಯಂಸೇವಾ ಸಂಗಳು ಏರ್ಪಡಿಸಿದ್ದ ಜಿಲ್ಲಾಮಟ್ಟದ ವಿಶ್ವ ಬೈಸಿಕಲ್ ದಿನ ಮತ್ತು ವಿಶ್ವ ಪರಿಸರ ದಿನದ ಸೈಕಲ್ ಜಾಥಾಕ್ಕೆ ಹಸಿರು ನಿಶಾನೆ ತೋರಿ ಮಾತನಾಡಿದರು.
ದಿನವೂ ದೈಹಿಕ ಚಟುವಟಿಕೆ ಮುಂದುವರಿಸುವುದರಿಂದ ಅಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಬಹುದು. ಉತ್ತಮ ಪರಿಸರದಿಂದ ಉತ್ತಮ ಮಾನಸಿಕ ಆರೋಗ್ಯ ಹೊಂದಲು ಸಾಧ್ಯ. ಯಾವ ವಸ್ತುವನ್ನು ಮರುಬಳಕೆ ಮಾಡಲು ಸಾಧ್ಯವಿಲ್ಲವೋ, ಅಂಥ ವಸ್ತುವನ್ನು ಬಳಸಬಾರದು. ಇದರಿಂದ ಪರಿಸರ ಸಂರಕ್ಷಣೆ ಮಾಡಬಹುದು ಎಂದರು.
ಮೂಳೆ ತರು, ಹಾಗೂ ಚನ್ನಪಟ್ಟಣದ ರೈಡರ್ ಕ್ಲಬ್ ಮುಖ್ಯಸ್ಥ ಡಾ.ಶಂಕರ್ ಮಾತನಾಡಿ, ಅಮೆರಿಕದ ಸೆನೆಟ್ನ 2018ರ ಏಪ್ರಿಲ್ನ ಠರಾವಿನಂತೆ ವಿಶ್ವ ಸೈಕಲ್ ದಿನ ಆಚರಿಸಲಾಗುತ್ತಿದೆ. ಸೈಕಲ್ ಒಂದು ಪರಿಸರಸ್ನೇಹಿ ಸಾಧನವಾಗಿದೆ. ಇದರ ಬಳಕೆಯಿಂದ ಉತ್ತಮ ದೈಹಿಕ, ಮಾನಸಿಕ ಆರೋಗ್ಯ ಹೊಂದಬಹುದು. ಜೊತೆಗೆ ಅಸಾಂಕ್ರಾಮಿಕ ರೋಗಗಳಾದ ರಕ್ತದೊತ್ತಡ, ಮಧುಮೇಹ, ಹೃದಯರೋಗಗಳನ್ನು ತಡೆಗಟ್ಟುವ ಜತೆಗೆ ದೇಹದ ತೂಕವನ್ನೂ ಇಳಿಸಿಕೊಳ್ಳಬಹುದು ಎಂದರು.
ದೈನಂದಿನ ಚಟುವಟಿಕೆಯಲ್ಲಿ ಸೈಕಲ್ ಬಳಸಿದರೆ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸಬಹುದು. ಇಂಧನ ಉಳಿಸಿ, ಪರಿಸರ ಸಂರಸಬಹುದು ಎಂದು ಸಲಹೆ ನೀಡಿದರು.
ಮನುಜ ಪ್ರಕೃತಿಯ ಭಾಗ: ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್.ಗಂಗಾಧರ್ ಮಾತನಾಡಿ, ಪ್ರಕೃತಿಯು ಮನುಷ್ಯ ಮತ್ತು ಜೀವಸಂಕುಲಗಳಿಗೆ ವರದಾನವಾಗಿದೆ. ನಾವು ಮಕ್ಕಳ ಭವಿಷ್ಯಕ್ಕಾಗಿ ಪ್ರಕೃತಿಯನ್ನು ಉಳಿಸಬೇಕಾಗಿದೆ. ಹಸಿರನ್ನು ಉಸಿರಾಡಿ, ಹಸಿರಿನ ಜೊತೆ ಜೀವಿಸಬೇಕಾದರೆ ಮನೆಗೊಂದು ಗಿಡ ನೆಡುವ ಅವಶ್ಯಕ್ತೆ ಇದೆ. ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ. ಆದರೆ, ನಾವು ಪ್ರಕೃತಿಯು ಒಂದು ಭಾಗವಾಗಿದ್ದೇವೆ. ಇದನ್ನು ನಾವೆಲ್ಲರೂ ಅರಿತುಕೊಳ್ಳಬೇಕಿದೆ ಎಂದು ಹೇಳಿದರು.
ನಗರದ ಪ್ರಮುಖ ಬೀದಿಗಳಲ್ಲಿ ಸೈಕಲ್ ಜಾಥಾ ಮಾಡಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಲಾಯಿತು. ಜಿಲ್ಲಾ ಕ್ರೀಡಾಂಗಣದಲ್ಲಿ ಸಸಿಗಳನ್ನು ನೆಡುವ ಜತೆಗೆ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.
ಯುವ ಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಯಲ್ಮ, ಜಿಪಂ ಎ.ಪಿ.ಒ, ಲೋಕೇಶ್, ಜಿಲ್ಲಾ ಎಸ್.ಬಿ.ಸಿ.ಸಿ ಸಂಯೋಜಕ ಸುರೇಶ್ ಬಾಬು, ೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಂಭುಲಿಂಗಯ್ಯ, ಆರೋಗ್ಯ ಇಲಾಖೆ ಜಿಲ್ಲಾಧ್ಯಕ್ಷ ಅಂಬರೀಶ್, ಹೋಲಿ ಕ್ರೆಸೆಂಟ್ ಆಂಗ್ಲ ಶಾಲೆಯ ಧೈಹಿಕ ಶಿಕ್ಷಕರಾದ ಸೋಮಶೇಖರ್, ಸತೀಶ್, ಮೆಹದಿಯಾ ಸಂಸ್ಥೆಯ ಇಮ್ರಾನ್ ಮತ್ತಿತರರಿದ್ದರು.