ಪ್ರಕರಣಗಳ ಇತ್ಯರ್ಥಕ್ಕೆ ಬೇಕು ವಕೀಲರೆಲ್ಲರ ಸಹಕಾರ

ctd 13 court-002
Published on

ಚಿತ್ರದುರ್ಗ: ಜಿಲ್ಲೆಯಲ್ಲಿ ಜುಲೈ 8ರಂದು ನಡೆಯಲಿರುವ ಬೃಹತ್‌ಲೋಕ ಆದಾಲತ್ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳನ್ನು ರಾಜೀ ಸಂಧಾನದ ಮೂ ಲಕ ಇತ್ಯರ್ಥಗೊಳಿಸಲು ಎಲ್ಲ ವಕೀಲರು ಸಹಕರಿಸ ಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಪ್ರೇಮಾವತಿ ಎಂ.ಮನಗೂಳಿ ಹೇಳಿ ದರು.

ಜಿಲ್ಲಾ ವಕೀಲರ ಸಂಘ ನಗರದ ನ್ಯಾಯಾಲಯ ಆವರಣದ ಗ್ರಂಥಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಉಜ್ವಲಾವೀರಣ್ಣ ಸಿದ್ದಣ್ಣನವರ್ ಅವರ ಸ್ವಾಗತ ಕಾರ‌್ಯಕ್ರಮದಲ್ಲಿ ಮಾತನಾಡಿದ ಅವರು,ಆದಾಲತ್ ಯಶಸ್ವಿಗೆ ವಕೀಲರು ಸಹಕರಿಸ ಬೇಕು. ನ್ಯಾಯ ವಿತರಣೆ ವ್ಯವಸ್ಥೆಯಲ್ಲಿ ಪರಸ್ಪರ ಸಹಕಾರದೊಂದಿಗೆ ಕಕ್ಷಿದಾರನಿಗೆ ಶೀಘ್ರ ನ್ಯಾಯವನ್ನು ಒದಗಿಸ ಬೇಕಿದೆ. ವಕೀಲರ ಸಂಘ ಶಿಸ್ತು,ಶಾಂತಿ ಸೌಹಾರ್ದತೆ ಮತ್ತು ಸಹಕಾರಕ್ಕೆ ಹೆಸರಾಗಿದೆ ಎಂದರು.

ನೂತನ ನ್ಯಾಯಾಧೀಶರನ್ನು ಸ್ವಾಗತಿಸಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಸಿ.ಶಿವುಯಾದವ್,2ನೇ ಹೆಚ್ಚು ವರಿ ಸಿವಿಲ್ ನ್ಯಾಯಾಧೀಶರ ಹುದ್ದೆ ಎರಡು ವರ್ಷಗಳಿಂದ ಖಾಲಿ ಇತ್ತು. ಜಿಲ್ಲಾ ನ್ಯಾಯಾಲಯದ 11 ನ್ಯಾಯಾಧೀಶರಲ್ಲಿ ಏಳು ಮಹಿಳಾ ನ್ಯಾಯಾಧೀಶರಿದ್ದಾರೆ. ವಕೀಲ ರು ಮತ್ತು ನ್ಯಾಯಾಧೀಶರು ಬಂಡಿಯ ಎರಡು ಚಕ್ರಗಳಿದ್ದಂತೆ.

ತ್ವರಿತ ನ್ಯಾಯವಿಚಾರಣೆಗೆ ವಕೀಲರ ಸಂಘ ಸಂಪೂರ್ಣ ಸಹಕಾರ ನೀಡಲಿದೆ ಎಂದರು. ಪ್ರದಾನ ಹಿರಿಯ ಸಿವಿಲ್ ನ್ಯಾಯಾಧೀಶ ಕೆಂಪರಾಜು,ಸಂಘದ ಉಪಾಧ್ಯಕ್ಷ ಜಿ.ಸಿ.ದಯಾನಂದ,ಪ್ರಧಾನ ಕಾರ‌್ಯದರ್ಶಿ ಎಂ.ಮೂರ್ತಿ ಖಜಾಂಚಿ ಅಜ್ಜಯ್ಯ,ಸಹ ಕಾರ‌್ಯದರ್ಶಿ ವಿಶ್ವನಾಥರೆಡ್ಡಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net