ಪ್ರಕರಣ ರಾಜಿ ಮೂಲಕ ಪರಿಹರಿಸಿಕೊಳ್ಳಲಿ

14Rayabag10
Published on

ರಾಯಬಾಗ: ಕಕ್ಷಿದಾರರು ಪ್ರಕರಣಗಳನ್ನು ತಮ್ಮಲ್ಲೇ ರಾಜಿ ಮೂಲಕ ಬಗೆ ಹರಿಸಿಕೊಂಡು ನೆಮ್ಮದಿ ಜೀವನ ನಡೆಸಬೇಕೆಂದು ಹಿರಿಯ ದಿವಾಣಿ ನ್ಯಾಯಾಧೀಶ ಜಗದೀಶ ಬಿಸೇರೊಟ್ಟಿ ಹೇಳಿದರು.

ಪಟ್ಟಣದ ಹಿರಿಯ ದಿವಾಣಿ ನ್ಯಾಯಾಲಯದಲ್ಲಿ ಈಚೆಗೆ ಜರುಗಿದ ಬೃಹತ್ ಲೋಕ ಅದಾಲತ್‌ನಲ್ಲಿ 2110 ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಿ ಮಾತನಾಡಿ, ಸಣ್ಣಪುಟ್ಟ ಸಮಸ್ಯೆಗಳನ್ನು ತಮ್ಮಲ್ಲೇ ಪರಿಹರಿಸಿಕೊಂಡು, ನೆರೆಹೊರೆಯವರೊಂದಿಗೆ ಸೌಹಾರ್ದತೆಯಿಂದ ಬದುಕಬೇಕು ಎಂದರು.

ವಕೀಲ ಎಸ್.ಕೆ.ರೆಂಟೆ, ಎಸ್.ಬಿ.ಪಾಟೀಲ, ಜಿ.ಎಸ್.ಪವಾರ, ಕೆ.ಎಸ್.ಫುಂಡಿಪಲ್ಲೆ, ಸಾರಿಕಾ ಕಾಂಬಳೆ, ದೇವಿ ನಾಯಿಕ, ಯು.ಎನ್.ಉಮ್ರಾಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net