

ಕಲಬುರಗಿ: ನಂದಿಕೂರದ ಮಲ್ಲಯ್ಯ ಸ್ವಾಮಿ ಅವರನ್ನು ಅಪಹರಿಸಿ, ಹಣ ದರೋಡೆ ಮಾಡಿದ ಪ್ರಕರಣವನ್ನು ಭೇದಿಸುವಲ್ಲಿ ನಗರ ಪೊಲೀಸರು ವಿಲರಾಗಿದ್ದಾರೆ ಎಂದು ಶ್ರೀರಾಮ ಸೇನೆ ಗೌರವಾಧ್ಯಕ್ಷ, ಆಂದೋಲಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಆರೋಪಿಸಿದರು.
ಟನೆ ನಡೆದು ಮೂರು ತಿಂಗಳಾಗಿದ್ದು, ಪ್ರಕರಣದ ಆರೋಪಿಯನ್ನು ಬಂಧಿಸಲು ಹೋದಾಗ ಪೊಲೀಸರಿಗೆ ಬೆದರಿಕೆ ಹಾಕಿ, ಅವಾಚ್ಯವಾಗಿ ನಿಂದಿಸಲಾಗಿತ್ತು. ಇಡೀ ಪೊಲೀಸ್ ವ್ಯವಸ್ಥೆಗೆ ಜನರು ಛೀಮಾರಿ ಹಾಕುತ್ತಿದ್ದಾರೆ. ಆದರೂ ಪೊಲೀಸರು ಅಪರಾಧಿಗಳಿಗೆ ಬೆದರಿ, ಹಣ ವಸೂಲಿ ಮಾಡುತ್ತಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಿಡಿ ಕಾರಿದರು.
ಪ್ರತಿ ಬಾರಿ ಪೊಲೀಸರಿಗೆ ಕೇಳಿದರೂ ಇಲ್ಲದೊಂದು ನೆಪ ಹೇಳುತ್ತಿದ್ದಾರೆ. ಪ್ರಕರಣದಲ್ಲಿ ಕಾರಪುಡಿ ಅಂಬ್ಯಾ, ಬಾಂಬೇ ಸತೀಶ, ಕೊಂಡಿ ರಾಮ್ಯಾ ಹಲ್ಲೆ ನಡೆಸಿದ್ದು, ಬಾಂಬೇ ಸತೀಶನನ್ನು ಪೊಲೀಸರು ಬಂಧಿಸಿದ್ದರೂ ಪ್ರಭಾವಿ ಸಚಿವರ ಒತ್ತಡಕ್ಕೆ ಮಣಿದು, ಬಿಟ್ಟು ಕಳುಹಿಸಿದ್ದಾರೆ. ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಯಾಕೆ ಪಡೆಯಲಿಲ್ಲ. ಇದುವರೆಗೆ ಕೊಂಡಿ ರಾಮ್ಯಾನ ಬಂಧಿಸಿಲ್ಲ ಎಂದರು.
ಎಲ್ಲ ಅಪರಾಧಿಗಳಿಂದ ಮಲ್ಲಯ್ಯ ಸ್ವಾಮಿ ಅವರಿಂದ ದೋಚಿದ ೨೦ ಲಕ್ಷ ರೂ.ವನ್ನು ವಾಪಸ್ ಕೊಡಿಸಬೇಕು. ಅಪರಾಧಿಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮೇ ೧೯ರಂದು ಬೇಡಿಕೆ ಈಡೇರಿಸಲು ಆಗ್ರಹಿಸಿ ಪೊಲೀಸ್ ಕಮೀಷನರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಆಗ್ರಹಿಸಿದರು.
ಮಲ್ಲಯ್ಯ ಸ್ವಾಮಿ ಪತ್ನಿ ಲಕ್ಷಿ$್ಮ ಹಿರೇಮಠ ಮಾತನಾಡಿ, ನಾವು ದುಡಿದ ಹಣವನ್ನು ದೋಚಿಸಿದ್ದು, ಪೊಲೀಸರು ಸ್ಪಂದಿಸುತ್ತಿಲ್ಲ. ಹಣ ಕೊಡಿಸಿ, ನ್ಯಾಯ ನೀಡಬೇಕುಲ ಇಲ್ಲದಿದ್ದರೆ ಪೊಲೀಸ್ ಕಮೀಷನರ್ ಕಚೇರಿ ಎದುರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ರಾಕೇಶ ಜಮಾದಾರ, ಮಲ್ಕಣ್ಣ ಹಿರೇಪೂಜಾರಿ, ಮಡಿವಾಳ ಅಮರಾವತಿ, ಮಲ್ಲಣ್ಣಗೌಡ ಪಾಟೀಲ್ ಇದ್ದರು.