ಪ್ರಕರಣ ತನಿಖೆಯಲ್ಲಿದೆ ಮಾತನಾಡಲ್ಲ

03 yerriswamy 0001
Published on

ಬಳ್ಳಾರಿ : ರಾಜ್ಯ ಸರ್ಕಾರ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸಲಾಗಿದೆ. ಸದ್ಯ ಆ ವಿಷಯದ ಬಗ್ಗೆ ಮಾತನಾಡುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಯಾವುದೇ ಪ್ರಕರಣವು ತನಿಖೆ ಹಂತದಲ್ಲಿದ್ದ ವೇಳೆ ಮಾತನಾಡಿದರೆ ಪ್ರಕರಣದ ಮೇಲೆ ಪ್ರಭಾವ ಬೀರಬಹುದು. ಯಾವುದೇ ಘಟನೆಯಾದರೂ ಮಾಜಿ ಸಿಎಂ ಕುಮಾರ ಸ್ವಾಮಿ ಡಿಸಿಎಂ ಶಿವಕುಮಾರ ರವರನ್ನು ಮಹಾನಾಯಕ ಅಂತ ನೂರು ಬಾರಿ ಹೇಳುತ್ತಾರೆ ಈಗ ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು. ಯುಪಿಎ ಸರ್ಕಾರ ಅವಧಿಯಲ್ಲಿ ಅಣ್ಣಾ ಹಜಾರೆ ಕಲ್ಲಿದ್ದಲು, 2ಜಿ ಹಗರಣ ನಡೆದಿವೆ ಎಂದು ಹೋರಾಟ ನಡೆಸಿದರೂ, ಕೊನೆಗೂ ತನಿಖೆಯಾದ ಬಳಿಕ ಯಾವುದೇ ಹಗರಣ ನಡೆದಿಲ್ಲ ಎಂಬ ಮಾಹಿತಿ ತಿಳಿಯಿತು. ಕುಕ್ಕೆ ಸುಬ್ರಹ್ಮಣ್ಯಂ ದೇವಸ್ಥಾನಕ್ಕೆ ಎಇಒ ಯೇಸುರಾಜ್ ಕ್ರಿಶ್ಚಿಯನ್ ಅಲ್ಲ. ಅದರೂ ಪರಿಶಿಷ್ಟ ಜಾತಿಯ ಹಿಂದೂ ಏಸುಕ್ರಿಸ್ತು ಜನಿಸಿದ ಡಿ.25 ರಂದು ಜನಿಸಿದ ಹಿನ್ನೆಲೆಯಲ್ಲಿ ಅವರ ಪೋಷಕರು ಯೇಸುರಾಜ್ ಎಂದು ಹೆಸರಿಟ್ಟಿದ್ದಾರೆ. ಅದನ್ನೇ ಬಿಜೆಪಿ ಹಿಂದೂ ಮುಸ್ಲಿಂ ಎಂಬ ವಿಕೃತ ಮನೋಭಾವ ಹೊಂದಿದೆ, ಎಲ್ಲರೂ ಒಂದೇ ಎಂಬ ಭಾವನೆ ಮೂಡಬೇಕು. ರಾಜ್ಯದ 223 ತಾಲೂಕುಗಳ ಬರ ಪೀಡಿತ ಎಂದು ಘೋಷಣೆ ಮಾಡಿದೆ, ಕೇಂದ್ರದಿಂದ ಅನುದಾನ ಬಿಡುಗಡೆಯಾಗಲು ಏಳು ತಿಂಗಳು ಬೇಕಾಯಿತು. ಕೇಂದ್ರದಿಂದ ಅನುದಾನದ ಬಿಡುಗಡೆಗೆ ರಾಜ್ಯ ಸಂಸದರು ಒಬ್ಬರು ಒತ್ತಾಯ ಮಾಡಲಿಲ್ಲ. ನರೇಂದ್ರ ಮೋದಿ ಪ್ರಧಾನಿಯಾಗುವ ಮುಂಚೆ ಎಲ್ಲ ಪಕ್ಷದ ಅಭ್ಯರ್ಥಿಗಳು ಒಟ್ಟಿಗೆ ಹೋಗಿ ಕೇಳುತ್ತಿದ್ದೇವು. ಆದರೆ ಈಗ ಕಾಲ ಬದಲಾಗಿದೆ ಯಾರು ಕೂಡ ಬರ ಪರಿಹಾರ ಕೇಳಲು ಬರುತ್ತಿಲ್ಲ. ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ, ಮುಖಂಡರಾದ ಗಾದೆಪ್ಪ, ಕಲ್ಲುಕಂಭ ಪಂಪಾಪತಿ, ವೆಂಕಟೇಶ ಹೆಗಡೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net