ಪ್ಯಾಲಿಸ್ತೇನ್‌ನ ಮೇಲೆ ಇಸ್ರೇಲ್ ದಾಳಿ ಖಂಡನೆ

Published on

ಬಳ್ಳಾರಿ : ಪ್ಯಾಲಿಸ್ತೇನ್ ಹಾಗೂ ಲೆಬನಾನ್ ಮೇಲೆ ಇಸ್ರೇಲ್ ದಾಳಿ ಖಂಡಿಸಿ, ಇಲ್ಲಿನ ತಾಲೂಕು ಕಚೇರಿ ವೃತ್ತದಲ್ಲಿ ಎಸ್‌ಯುಸಿಐ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಎಸ್‌ಯುಸಿಐ ಜಿಲ್ಲಾ ಸಮಿತಿ ಸದಸ್ಯೆ ಡಿ.ನಾಗಲಕ್ಷ್ಮಿ ಮಾತನಾಡಿ, ಒಂದು ವರ್ಷದ ಹಿಂದೆ ಹಮಾಸ್ ನಡೆಸಿದ್ದ ದಾಳಿಯನ್ನು ಮುಂದಿಟ್ಟುಕೊಂಡು, ಇಸ್ರೇಲ್ ದೇಶವು ಪ್ಯಾಲೇಸ್ತೇನ್‌ನ ಗಾಜಾ ಪಟ್ಟಿಯ ಮೇಲೆ ಕಳೆದ ಒಂದು ವರ್ಷದಿಂದ ನಿರಂತರವಾಗಿ ಸಾಮಾನ್ಯ ಪ್ರಜೆಗಳ ಮೇಲೆ ದಾಳಿ ನಡೆಸುತ್ತಿದೆ. ಇಸ್ರೇಲ್ ಸೇನೆ ದಾಳಿಯಿಂದ ಗಾಜಾ ಪಟ್ಟಿಯಲ್ಲಿ 42 ಸಾವಿರ ಸಾಮಾನ್ಯ ಜನರು ಸತ್ತಿದ್ದಾರೆ. ಇದರಲ್ಲಿ ಅರ್ದಷ್ಟು ಮಹಿಳೆಯರು, ಮಕ್ಕಳು ಸೇರಿದ್ದಾರೆ. ಈ ಎರಡೂ ದೇಶಗಳಲ್ಲಿ ಲಕ್ಷಾಂತರ ಜನ ನಿರಶ್ರಿತರರಾಗಿದ್ದಾರೆ. ಊಟಕ್ಕಾಗಿ ಹಾಹಾಕಾರವೆದ್ದಿದೆ. ಯುದ್ಧದ ಕ್ರೌರ್ಯ ನರ್ತನದಿಂದ ಮಾನವೀಯತೆೆ ನಲುಗುತ್ತಿದೆ. ಈ ಕೂಡಲೆ ಇಸ್ರೇಲ್ ಈ ಯುದ್ಧ ದಾಳಿಯನ್ನು ನಿಲ್ಲಿಸಬೇಕು. ಅಂತಾರಾಷ್ಟ್ರೀಯ ಸಮುದಾಯ ಇಸ್ರೇಲ್ ಮೇಲೆ ಒತ್ತಡಹೇರಬೇಕು ಎಂದು ಆಗ್ರಹಿಸಿದರು. ಎಸ್‌ಯುಸಿಐ ಜಿಲ್ಲಾ ಸಮಿತಿ ಸದಸ್ಯ ಸೋಮಶೇಖರ ಗೌಡ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net