

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:ಮಹಾರಾಷ್ಟ್ರದ ಪುಣೆದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 5ನೇ ಪ್ಯಾರಾ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್ಶಿಪ್ನಲ್ಲಿ ಹುಬ್ಬಳ್ಳಿಯ ಶೂಟರ್ಸ್ 1 ಚಿನ್ನ, 1ಬೆಳ್ಳಿ ಹಾಗೂ 3 ಕಂಚಿನ ಪದಕಗಳನ್ನು ಜಯಿಸಿದ್ದಾರೆ.
ಚಾಂಪಿಯನ್ಶಿಪ್ನಲ್ಲಿ ಕರ್ನಾಟಕದಿಂದ 6 ಜನ ಪಿಸ್ತೂಲ್ ಶೂಟರ್ಸ್, 5 ಜನ ರೈಫಲ್ ಶೂಟರ್ಸ್ ಹಾಗೂ ಒಬ್ಬರು ಬ್ಲೈಂಡ್ ಶೂಟರ್ ಭಾಗವಹಿಸಿದ್ದರು.
ಹುಬ್ಬಳ್ಳಿಯ ರಾಕೇಶ ನಿಡಗುಂದಿ ರೈಫಲ್ ವಿಭಾಗದ 50 ಮೀಟರ್ 3 ಪೋಜಿಸನ್ನಲ್ಲಿ ಚಿನ್ನ ಹಾಗೂ 50 ಮೀಟರ್ ಪ್ರೋನ್ ಮಿಕ್ಸಡ್ನಲ್ಲಿ ಕಂಚಿನ ಪದಕ ಜಯಿಸಿದರು.
ಜ್ಯೋತಿ ಸಣ್ಣಕ್ಕಿ ರೈಫಲ್ ವಿಭಾಗದ 50 ಮೀ. 3 ಪೋಜಿಸನ್ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ತಂಡ ವಿಭಾಗದ 40 ಮೀ. ಪ್ರೋನ್ ಮಿಕ್ಸಡ್ನಲ್ಲಿ ರಾಕೇಶ್ ನಿಡಗುಂದಿ, ಶಂಕರಲಿಂಗ ತವಳಿ ಹಾಗೂ ಜ್ಯೋತಿ ಸಣ್ಣಕ್ಕಿ ಬೆಳ್ಳಿ ಮತ್ತು 10 ಏರ್ ರೈಫಲ್ ಸ್ಟ್ಯಾಂಡಿಂಗ್ನಲ್ಲಿ ರಾಕೇಶ ನಿಡಗುಂದಿ, ಶಂಕರಲಿಂಗ ತವಳಿ ಹಾಗೂ ಸಚಿನ್ ಸಿದ್ದಣ್ಣವರ ಕಂಚಿನ ಪದಕ ಪಡೆದಿದ್ದಾರೆ.