ಪ್ಯಾನಿಕ್ ಬಟನ್ ಆದೇಶ ಹಿಂಪಡೆಗೆ ಆಗ್ರಹ

ydg03
Published on

ಯಾದಗಿರಿ: ವಾಹನಗಳಿಗೆ ಜಿಪಿಎಸ್ ಪ್ಯಾನಿಕ್ ಬಟನ್ ಅಳವಡಿಸಲು ಮಾಡಿದ ಆದೇಶ ಕೂಡಲೇ ಹಿಂಪಡೆಯುವAತೆ ಆಗ್ರಹಿಸಿ ಕರ್ನಾಟಕ ಚಾಲಕರ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಚಟ್ನಳ್ಳಿ ನೇತೃತ್ವದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ಮಾಡಲಾಯಿತು.

ಈ ವೇಳೆ ಸೇರಿದ್ದ ಪ್ರತಿಭಟನಾಗಾರರನ್ನು ಉz್ದೆÃಶಿಸಿ ಮಾತನಾಡಿದ ಅಧ್ಯಕ್ಷ ಚಟ್ನಳ್ಳಿ, ಸಾರಿಗೆ ಇಲಾಖೆಯಲ್ಲಿ ವಾಹನಗಳ ಎಫ್‌ಸಿ ಮಾಡಲು ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಸಲು ೧೪೭೦೦ ರೂ.ಶುಲ್ಕ, ಪಾಸಿಂಗ್ ಮಾಡಲು ೪೦೦೦ ಹೀಗೆ ಒಟ್ಟು ೧೮೭೦೦ ರೂ.ತೆಗೆದುಕೊಳ್ಳುತ್ತಾರೆ. ಬಾಡಿಗೆ ವಾಹನದಲ್ಲಿ ಯಾರಾದರೂ ಪ್ರಯಾಣಿಕರ ಮಕ್ಕಳು ಪ್ಯಾನಿಕ್ ಬಟನ್ ಒತ್ತಿದರೆ ಅದಕ್ಕೂ ಕೂಡ ದಂಡ ವಿಧಿಸಲಾಗುತ್ತಿದ್ದು, ಇದೊಂದು ಅವೈಜ್ಞಾನಿಕ ಆದೇಶವಾಗಿದ್ದು, ಇದನ್ನೂ ಕೂಡಲೇ ರದ್ದುಪಡಿಸಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಸುವುದಾರೆ ನಮ್ಮ ವಾಹನಗಳಿಗೆ ೫ರಾಜ್ಯದ ಪರ್ಮಿಟ್ ನೀಡಬೇಕು. ಬ್ರೋಕರ್ ಹಾವಳಿ ತಪ್ಪಿಸಬೇಕು ಎಂದು ಒತ್ತಾಯಿಸಿದರು.

ಮಲ್ಲಣ್ಣಗೌಡ, ಹಣಮಂತ ನಾಯಕ್, ಅಜಯಕುಮಾರ ಮಾಸನ್, ಹೊನ್ನಪ್ಪ ಜಂಗಳಿ, ದೇವು ಪಾಟೀಲ್, ವೆಂಕಟೇಶ, ಲಿಂಗಾರೆಡ್ಡಿ, ಬಸವರಾಜ ಯಾಳಗಿ, ದೇವು ನಾಯಕ್, ಶರಣಗೌಡ, ಲೋಕೇಶ ನಾಯಕ್, ಮಲ್ಲಯ್ಯಾ ಸ್ವಾಮಿ, ರಾಮು, ನವೀನಕುಮಾರ, ವಿಶ್ವನಾಥ ಸಾಹುಕಾರ್, ಯಂಕಪ್ಪ ಮನಗನಾಳ್, ಹನಮಂತ ನಾಯ್ಕಲ್, ಸಿದ್ದಪ್ಪ, ಸಂತೋಷ ತಡಬಿಡಿ, ರಮೇಶ ನಾಯಕ್ ಇತರರಿದ್ದರು. ನೇತಾಜಿ ಸರ್ಕಲ್‌ದಿಂದ ಆರ್‌ಟಿಒ ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ, ಆರ್‌ಟಿಒ ಅಧಿಕಾರಿಗಳ ಮೂಲಕ ಸಾರಿಗೆ ಆಯುಕ್ತರಿಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಜಿಲ್ಲಾಧಿಕಾರಿಗೆ ಪ್ರತ್ಯೇಕ ಬೇಡಿಕೆಗಳ ಮನವಿ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net