ಪೌಷ್ಟಿಕಾಂಶಯುಕ್ತ ಆಹಾರದ ಮಹತ್ವ ಸಾರುವ ಪೋಷಣ್ ರಥಯಾತ್ರೆಗೆ ಚಾಲನೆ

SOR WEB 2222
Published on

ಸೊರಬ: ಪೋಷಣ ಅಭಿಯಾನದ ಮೂಲಕ ಪೌಷ್ಟಿಕ ಆಹಾರ ಮಹತ್ವ ಕುರಿತು ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದು ಹಿರಿಯ ನ್ಯಾಯಾಧೀಶ, ಕಾನೂನು ಸೇವಾ ಸಮಿತಿ ಅಧ್ಯಕ್ಷ ಪ್ರಭಾಕರ್ ರಾವ್ ತಿಳಿಸಿದರು.

ಸೋಮವಾರ ಪುರಸಭೆ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಪೋಷಣ್ ರಥಕ್ಕೆ ಚಾಲನೆ ನೀಡಿ ಮಾತನಾಡಿ, ಬಡತನದ ಕಾರಣ ಹಾಗೂ ಶಿಕ್ಷಣದ ಕೊರತೆಯಿಂದ ಪೌಷ್ಟಿಕ ಆಹಾರ ಪಡೆಯುವಲ್ಲಿ ಬಹುತೇಕ ಮಹಿಳೆಯರು ಮತ್ತು ಮಕ್ಕಳು ವಿಫಲರಾಗುತ್ತಿದ್ದಾರೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಪೋಷಕಾಂಶವುಳ್ಳ ಆಹಾರವನ್ನು ನೀಡುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಿಸುವ ಹಾಗೂ ಅವರನ್ನು ಸಮರ್ಥರನ್ನಾಗಿಸುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪಟ್ಟಣದ ಮುಖ್ಯರಸ್ತೆಯಲ್ಲಿ ಜಾಗೃತಿ ಮೂಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net