ಪೌಷ್ಟಿಕಾಂಶಯುಕ್ತ ಆಹಾರ ಪ್ರದರ್ಶನ

Nutritious food
Published on

ಯಲ್ಲಾಪುರ: ತಾಲೂಕಿನ ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ಸಮೃದ್ಧಿ ಇಕೋ ಕ್ಲಬ್ ಅಡಿಯಲ್ಲಿ ಇತ್ತೀಚೆಗೆ ಫುಡ್ ಫೆಸ್ಟ್ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಕೋಣೆಮನೆ, ಆಹಾರ ನಮ್ಮ ಬದುಕಿನ ಬಹುಮುಖ್ಯ ಅಂಶಗಳಲ್ಲೊಂದು. ಅದರ ಬಗ್ಗೆ ಅರಿತುಕೊಳ್ಳುವುದು ತುಂಬಾ ಅವಶ್ಯಕ. ಜಂಕ್ ಫುಡ್ ಸೇವನೆಯಿಂದ ಆರೋಗ್ಯ ಹಾಳು ಮಾಡಿಕೊಳ್ಳುವುದು ಹೆಚ್ಚುತ್ತಿದೆ. ಪೋಷಕಾಂಶಯುಕ್ತ ಆಹಾರ ಸೇವನೆ ಶಾಲಾ ದಿನಗಳಲ್ಲಿಯೇ ಅರಿಯುವುದರಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದರು.


ವಿ.ಕೆ. ಗಾಂವ್ಕಾರ, ಶಿಕ್ಷಕರಾದ ಲತಾ ಹೆಗಡೆ, ರಾಘವೇಂದ್ರ ಹೆಗಡೆ ಇತರರಿದ್ದರು. ವಿದ್ಯಾರ್ಥಿಗಳಿಂದ ಪೋಷಕಾಂಶಯುಕ್ತ ಆಹಾರದ ಪ್ರದರ್ಶನ ಮತ್ತು ಮಾರಾಟ ನಡೆಯಿತು. ಹಲವು ವಿಧಗಳ ಮೊಳಕೆ ಕಾಳುಗಳು, ಜೋಳದ ರೊಟ್ಟಿ, ಹಸಿ ತರಕಾರಿ, ಫ್ರುಟ್ ಸಲಾಡ್, ವಿಧ ವಿಧದ ಸ್ವೀಟ್‌ಗಳು, ಸ್ಥಳೀಯ ಸಿಹಿ ಖಾದ್ಯಗಳು, ಸ್ಥಳೀಯ ಹಣ್ಣುಗಳು, ಪೋಷಕಾಂಶಯುಕ್ತ ಪಲ್ಯಗಳನ್ನು ವಿದ್ಯಾರ್ಥಿಗಳು ಮನೆಯಲ್ಲಿಯೇ ತಯಾರಿಸಿ ತಂದು ಮಾರಾಟ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net