ಪೌಷ್ಟಿಕ ಆಹಾರ ಸೇವಿಸಿ ಸದೃಢರಾಗಿ

02
Published on

ದೋರನಹಳ್ಳಿ : ಶಾಲೆಯಲ್ಲಿ ನೀಡುವ ಪೌಷ್ಟಿಕ ಆಹಾರವನ್ನು ಮಕ್ಕಳು ಸೇವಿಸಿ ಸದೃಢರಾಗಬೇಕು ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಹೇಳಿದರು.

ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೌಷ್ಟಿಕ ಆಹಾರ ವಿತರಣಾ ಕರ‍್ಯಕ್ರಮ ಉದ್ಘಾಟಿಸಿದ ಅವರು, ಆರೋಗ್ಯಯುತ ಸಮಾಜ ನಿರ್ಮಾಣಕ್ಕಾಗಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವುದು ಬಹಳ ಅಗತ್ಯವಾಗಿದೆ. ಇದರಿಂದ ಈ ಭಾಗದ ಮಕ್ಕಳ ಅಪೌಷ್ಟಿಕತೆ ನಿವಾರಣೆಯಾಗಲಿದೆ ಎಂದರು.

ದೇಶದಲ್ಲಿ ಬಹಳಷ್ಟು ಜನ ಒಪ್ಪತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಇದೆ. ಆದರೆ ನಮಗೆ ಊಟದ ಕೊರತೆ ಇಲ್ಲ. ಪೌಷ್ಟಿಕ ಆಹಾರದ ಕೊರತೆ ನೀಗಿಸಲು ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಿ ವಿಶೇಷವಾಗಿ ಕಲ್ಯಾಣ ಕರ್ನಾಟಕದ ಏಳು, ವಿಜಯಪುರ ಸೇರಿ ೮ ಜಿಲ್ಲೆಗಳಲ್ಲಿ ಪೌಷ್ಟಿಕ ಆಹಾರ ಯೋಜನೆ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಸುಶೀಲಾ ಮಾತನಾಡಿ, ಜಿಲ್ಲೆಯ ಮಹಿಳೆಯರಲ್ಲಿ ಶೇ.೫೦ ರಕ್ತಹೀನತೆ ಕಂಡು ಬಂದಿದೆ. ಹೀಗಾಗಿ ಉತ್ತಮ ಆಹಾರ, ಹಣ್ಣು-ಹಂಪಲು ಸೇವಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗರೀಮಾ ಪನ್ವಾರ್ ಮಾತನಾಡಿದರು. ಮುಖ್ಯಗುರು ಶಾಂತಪ್ಪ ಕೆರುಟಗಿ, ಸಂಗಮೇಶ, ಶ್ರೀದೇವಿ, ಸಂಗೀತಾ ಇತರರಿದ್ದರು. ಡಿಡಿಪಿಐ ಟಿ.ಮಂಜುನಾಥ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕರಾದ ಶಿವಪ್ಪ, ಸವಿತಾ ನಿರೂಪಣೆ ಮಾಡಿದರು. ದೇವಪ್ಪ ವಂದಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net