ಪೌಷ್ಟಿಕ ಆಹಾರ ಸೇವಿಸಿ

nrp food
ಎನ್.ಆರ್.ಪುರ ತಾಲೂಕು ಗಡಿಗೇಶ್ವರ ಸರ್ಕಾರಿ ಶಾಲೆಯಲ್ಲಿ ಪೌಷ್ಟಿಕ ಆಹಾರದ ಪ್ರದರ್ಶನ ನಡೆಯಿತು. ಡಾ. ವಿನಯ್, ವೈ.ಎಂ.ಲಲಿತಾ, ಶ್ರೀನಿವಾಸ ಗೌಡ, ಡಿ.ಎನ್.ಮಂಜುನಾಥ್, ಮಂಜುಳಾ ಇದ್ದರು.
Published on

ಎನ್.ಆರ್.ಪುರ: ಸಾರ್ವಜನಿಕರಿಗೆ ಪೌಷ್ಟಿಕ ಆಹಾರದ ಮಹತ್ವದ ಅರಿವು ಮೂಡಿಸಿ ಎಂದು ಆಡುವಳ್ಳಿ ಗ್ರಾಪಂ ಅಧ್ಯಕ್ಷ ಶ್ರೀನಿವಾಸ ಗೌಡ ತಿಳಿಸಿದರು.

ಗಡಿಗೇಶ್ವರ ಸರ್ಕಾರಿ ಪ್ರೌಢಶಾಲೆಯಲ್ಲಿ ಆರೋಗ್ಯ ಇಲಾಖೆಯಿಂದ ನಡೆದ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹದಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಆಹಾರ ಪದ್ಧತಿಗೆ ಬದಲಾಗಿ ಜಂಕ್‌ುಡ್ ಕಡೆಗೆ ಆಸಕ್ತಿ ಹೊಂದುವ ಪರಿಣಾಮವಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ಸಂಘದ ಸದಸ್ಯರಿಗೆ ಸಮತೋಲನ ಪೌಷ್ಟಿಕ ಆಹಾರದ ಮಹತ್ವದ ಮಾಹಿತಿ ನೀಡಬೇಕು ಎಂದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ.ಲಲಿತಾ ಮಾತನಾಡಿ, ಆಹಾರದ ಸೇವನೆ ಸರಿಯಾದ ಕ್ರಮದಲ್ಲಿ ಮಾಡದಿದ್ದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಪ್ರತಿದಿನ ಸೇವಿಸುವ ಆಹಾರದಲ್ಲಿ ಕಾರ್ಬೋಹೈಡ್ರೇಟ್, ಪ್ರೊಟೀನ್, ವಿಟಮಿನ್ ಮತ್ತು ಮಿನರಲ್ ಕೊಬ್ಬು, ನೀರು ಮತ್ತು ನಾರಿನ ಅಂಶಗಳು ಇರಬೇಕು. ಸೊಪ್ಪು, ತರಕಾರಿ, ಮೊಳಕೆಕಾಳುಗಳು, ಹಣ್ಣುಗಳಿಂದ ಕೂಡಿದ ಆಹಾರ ಪದಾರ್ಥಗಳನ್ನು ಸೇವಿಸಬೇಕು ಎಂದರು.

ಕಟ್ಟಿನಮನೆ ಪ್ರಾಥಮಿಕ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಡಾ. ವಿನಯ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಗರ್ಭಧಾರಣೆ, ಬಾಲ್ಯವಿವಾಹ ಪ್ರಕರಣಗಳು ಹೆಚ್ಚಾಗುತ್ತಿವೆ. ಹದಿಹರೆಯದವರು ಮನಸ್ಸಿನ ಮೇಲೆ ಹಿಡಿತ ಸಾಧಿಸಿ ವಿದ್ಯಾಭ್ಯಾಸಕ್ಕೆ ಗಮನ ಕೊಡಬೇಕು. ಪ್ರೀತಿ, ಪ್ರೇಮದಲ್ಲಿ ಸಿಲುಕದೆ ಪಾಲಕರು, ಗುರುಗಳ ಮಾರ್ಗದರ್ಶನದಲ್ಲಿ ಬದುಕು ರೂಪಿಸಿಕೊಳ್ಳಬೇಕು ಎಂದರು.

ಬಾಂಧವ್ಯ ನೆಟ್‌ವರ್ಕ್ ಸಿಬ್ಬಂದಿ ರಾಗಿಣಿ ಅವರು ಏಡ್ಸ್ ಕುರಿತು ಮಾಹಿತಿ ನೀಡಿದರು. ಶಾಲೆ ಮುಖ್ಯಶಿಕ್ಷಕ ಡಿ.ಎನ್.ಮಂಜುನಾಥ್, ಪಿಡಿಓ ಮಂಜುಳಾ ಮಾತನಾಡಿದರು. ಕವಿತಾ, ಸೌಮ್ಯಾ, ಉಷಾ, ಆಶಾ, ಪೂರ್ಣಿಮಾ, ಸಂಜೀವಿನಿ ಒಕ್ಕೂಟದ ಸದಸ್ಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net