ಪೌಷ್ಟಿಕ ಆಹಾರ ಸೇವನೆಯಿಂದ ರಕ್ತಹೀನತೆ ತಡೆ - ಆರೋಗ್ಯ ನಿರೀಕ್ಷಣಾಧಿಕಾರಿ ಗವಿಸಿದ್ದಪ್ಪ ಗೊಂದಿಹೊಸಳ್ಳಿ ಮಾಹಿತಿ

14ALD01
ಅಳವಂಡಿ ಸಮೀಪದ ಹಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಕವಲೂರು ಪಿಎಚ್‌ಸಿಯಿಂದ ಅನಿಮಿಯಾ ತಪಾಸಣೆ ನಡೆಯಿತು. ಪ್ರಮುಖರಾದ ಗವಿಸಿದ್ದಪ್ಪ, ವೀರಣ್ಣ, ಹಂಪಮ್ಮ, ರವಿಕುಮಾರ, ಗೌತಮಿ, ಯಲ್ಲಮ್ಮ, ಉಮಾ ಇತರರಿದ್ದರು.
Published on

ಅಳವಂಡಿ: ಮಕ್ಕಳು, ಹದಿಹರೆಯದವರು ಹಾಗೂ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುವ ರಕ್ತಹೀನತೆ ತಡೆಗಟ್ಟಲು ಸರಿಯಾದ ಜೀವನ ಶೈಲಿ ಮುಖ್ಯ ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ಗವಿಸಿದ್ದಪ್ಪ ಗೊಂದಿಹೊಸಳ್ಳಿ ತಿಳಿಸಿದರು.

ಸಮೀಪದ ಹಟ್ಟಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕವಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ನಡೆದ ಸಾಮೂಹಿಕ ಅನಿಮಿಯಾ (ರಕ್ತಹೀನತೆ) ತಪಾಸಣೆ ಶಿಬಿರಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

ರಕ್ತಹೀನತೆ (ಅನಿಮಿಯಾ) ಎನ್ನುವುದು ದೇಹದ ಅಂಗಾಂಶಗಳಿಗೆ ಆಮ್ಲಜನಕ ಸಾಗಿಸುವ ಕೆಂಪು ರಕ್ತ ಕಣಗಳಲ್ಲಿ ಕೊರತೆ ಉಂಟಾಗುವುದು. ಕೆಂಪು ರಕ್ತ ಕಣದ ಪ್ರೋಟಿನ್ ಆಗಿದ್ದು, ದೇಹದಲ್ಲಿ ಆಮ್ಲಜನಕ ಉತ್ಪಾದನೆ ಹೆಚ್ಚಿಸುತ್ತದೆ ಮತ್ತು ರಕ್ತ ಕಣಗಳಿಗೆ ಕೆಂಪು ಬಣ್ಣವನ್ನು ನೀಡುತ್ತದೆ. ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ 12 ಮಿ.ಗ್ರಾಂ.ಗಿಂತ ಕಡಿಮೆ ಇದ್ದರೆ ರಕ್ತಹೀನತೆ ಕಂಡುಬರುತ್ತದೆ. ರಕ್ತಹೀನತೆ ತಡೆಗಟ್ಟಲು ವಾರದಲ್ಲಿ ಒಂದು ದಿನ ಐಎಫ್‌ಎ ಮಾತ್ರೆ ಹಾಗೂ ವರ್ಷದಲ್ಲಿ ಎರಡು ಬಾರಿ ಅಲ್ಬಂಡಜೋಲ್ ಮಾತ್ರೆಗಳನ್ನು ನೀಡಲಾಗುತ್ತಿದೆ ಎಂದರು.

ಮುಖ್ಯಶಿಕ್ಷಕ ವೀರಣ್ಣ ಮಟ್ಟಿ ಮಾತನಾಡಿ, ಪೌಷ್ಟಿಕ ಆಹಾರ ಸೇವನೆಯಿಂದ ರಕ್ತಹೀನತೆ ಕಡಿಮೆ ಆಗುತ್ತದೆ. ಕಾರಣ ಮಕ್ಕಳು ಕರಿದ ಪದಾರ್ಥಗಳನ್ನು ತಿನ್ನದೇ ಮೊಳಕೆ ಕಾಳು, ತರಕಾರಿ, ಹಣ್ಣುಗಳನ್ನು ಸೇವಿಸಬೇಕು ಎಂದರು.

ಶಿಕ್ಷಕರಾದ ಹಂಪಮ್ಮ, ರವಿಕುಮಾರ, ಗೌತಮಿ, ಆರೋಗ್ಯ ಇಲಾಖೆಯ ಯಲ್ಲಮ್ಮ, ಆಶಾ ಕಾರ್ಯಕರ್ತೆ ಉಮಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net