

ಯಾದಗಿರಿ: ನಗರಸಭೆಯಲ್ಲಿ ನಡೆಯುವ ಪ್ರತಿ ಸಭೆಗಳಲ್ಲಿ ಪೌರಾಯುಕ್ತ ಸದಸ್ಯರ ವಿರುದ್ಧ ದುರ್ವತನೆ ತೋರುತ್ತಿದ್ದು, ಕೂಡಲೇ ಈ ಬಗ್ಗೆ ಕ್ರಮಕ್ಕೆ ಆಗ್ರಹಿಸಿ ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ ನೇತೃತ್ವದ ನಿಯೋಗ ಮಂಗಳವಾರ ಶರಣಬಸಪ್ಪ ಕೋಟೆಪ್ಪಗೋಳಗೆ ಮನವಿ ಸಲ್ಲಿಸಿತು.
ಈ ವೇಳೆ ಮಾತನಾಡಿದ ಅಂಬಿಗೇರ, ನ.17ರಂದು ಕರೆದಿದ್ದ ಸ್ಥಾಯಿ ಸಮಿತಿ ಸಭೆಯಲ್ಲಿ ಪೌರಾಯುಕ್ತರು ದುರ್ವರ್ತನೆ ತೋರಿ ಏಕಪಕ್ಷೀಯ ನಿರ್ಣಯ ಕೈಗೊಳ್ಳುವುದು, ಸದಸ್ಯರ ವಿರುದ್ಧ ಸಿಬ್ಬಂದಿ ಕಟ್ಟಿಕೊಂಡು ಕಚೇರಿ ಮುಂದೆ ಪ್ರತಿಭಟನೆ ನಡೆಸುವ ಮೂಲಕ ಅಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಸ್ಥಾಯಿಸಮಿತಿ ಸಭೆ ನಿಗದಿಪಡಿಸಿದ ದಿನ ಕರೆಯಲಾಗಿತ್ತು. ಆದರೆ ಪೌರಾಯುಕ್ತರು ತಮ್ಮ ಕೊಠಡಿಯಲ್ಲಿಯೇ ಇದ್ದರೂ ಸಹ ಸಭೆಗೆ ಸರಿಯಾದ ಸಮಯಕ್ಕೆ ಬಾರದೆ ಕೌಂನ್ಸಿಲ್ಗೆ ಅಗೌರವ ತೋರಿದ್ದಾರೆ. ಈ ಬಗ್ಗೆ ಕೇಳಿದರೆ, ತಾವೊಬ್ಬ ಅಕಾರಿ ಎಂಬದನ್ನು ಮರೆತು ಅಸಂವಿಧಾನಿಕ ಮಾತನಾಡಿದ್ದಾರೆ. ಕಳೆದ ಆರೇಳು ತಿಂಗಳಿನಿಂದ ನಗರದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದು, ಸಾರ್ವಜನಿಕರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ ಎಂದರು.
ಈ ಮೊದಲು ಪೌರಾಯುಕ್ತರು ಏಕಪಕ್ಷಿಯ ನಿಧರ್ಾರ ಕೈಗೊಳ್ಳುತ್ತಿರುವುದನ್ನು ನಾವು ಪ್ರಶ್ನಿಸಿದ್ದಕ್ಕೆ, ನಮ್ಮ ವಿರುದ್ಧವೆ ಸುಳ್ಳು ಆರೋಪ ಮಾಡಿ ನಗರಸಭೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು. ಅಕಾರಿಯ ಈ ನಡೆ ಯಾದಗಿರಿ
ನಗರಸಭೆ ಇತಿಹಾಸದಲ್ಲಿಯೇ ಒಂದು ಕಪ್ಪು ಚುಕ್ಕೆಯಾಗಿದೆ ಎಂದು ಕಿಡಿಕಾರಿದರು.
ನಗರದ ಅಭಿವೃದ್ಧಿ ಕೆಲಸಗಳಿಗೆ ಪೌರಾಯುಕ್ತರು ತೊಡಕಾಗಿರುವುದರಿಂದ ಅವರ ಉಪಸ್ಥಿತಿಯಲ್ಲಿ ಸಾಮಾನ್ಯಸಭೆ ನಡೆಸದಿರಲು ತೀಮರ್ಾನಿಸಲಾಗಿದೆ. ಕೂಡಲೇ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು. ಉಪಾಧ್ಯಕ್ಷೆ ಚಂದ್ರಕಲಾ ಚಂದ್ರಕಾಂತ ಮಡ್ಡಿ, ಸದಸ್ಯೆ ರುಕಯ್ಯಾ ಬೇಗಂ ಇದ್ದರು.