ಪೌರಾಯುಕ್ತ ಎಂ.ರಾಜಣ್ಣ ವರ್ಗಾವಣೆ

Transfer
ನಗರಸಭೆ ಆಯುಕ್ತ ರಾಜಣ್ಣ
Published on

ಕೊಳ್ಳೇಗಾಲ: ಕೊಳ್ಳೇಗಾಲ ನಗರಸಭೆ ಪೌರಾಯುಕ್ತ ಎಂ.ರಾಜಣ್ಣ ಅವರನ್ನು ವರ್ಗಾವಣೆ ಮಾಡಿ ನಗರಾಭಿವೃದ್ಧಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಟಿ.ಮಂಜುನಾಥ್ ಆದೇಶ ಹೊರಡಿಸಿದ್ದಾರೆ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ 4 ತಿಂಗಳ ಹಿಂದೆ ನಂಜನಗೂಡು ನಗರಸಭೆಯಿಂದ ಕೊಳ್ಳೇಗಾಲ ನಗರಸಭೆಗೆ ಎಂ.ರಾಜಣ್ಣ ಅವರನ್ನು ವರ್ಗಾವಣೆ ಮಾಡಲಾಗಿತ್ತು. ರಾಜಣ್ಣ ಅವರು ಕೊಳ್ಳೇಗಾಲ ನಗರಸಭೆಗೆ ಬಂದ ನಂತರ ನಗರಸಭೆ ಆಡಳಿತ ಮಂಡಳಿ ಅವಧಿ ಮುಗಿದಿದ್ದ ಹಿನ್ನೆಲೆಯಲ್ಲಿ ರಾಜಣ್ಣ ಅವರೇ ನಗರಸಭೆಯ ಆಡಳಿತವನ್ನು ನಿರ್ವಹಿಸುತ್ತಿದ್ದರು. ಇದೀಗ ಸರ್ಕಾರ ಅವರನ್ನು ಯಾವುದೇ ಸ್ಥಳ ತೋರಿಸದೆ ಆ.11 ರಂದು ವರ್ಗಾವಣೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net