ಪೌರಾಣಿಕ ರಂಗ ಪರಂಪರೆ ಪ್ರೋತ್ಸಾಹಿಸಿ

KRP- 1
Published on

ಕೆ.ಆರ್.ಪೇಟೆ : ಪೌರಾಣಿಕ ನಾಟಕ ಪರಂಪರೆಯನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಎಚ್. ಟಿ. ಲೋಕೇಶ ಹೇಳಿದರು. ಪಟ್ಟಣದ ಶ್ರೀರಂಗ ಚಿತ್ರಮಂದಿರದ ಆವರಣದಲ್ಲಿ ಡಾ.ರಾಜ್‌ಕುಮಾರ್ ಕಲಾಸಂಘದವರು ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿರುವ ಪೌರಾಣಿಕ ನಾಟಕೋತ್ಸವ- 10 ದಿನಗಳ ವಿಶೇಷ ರಂಗ ಪ್ರದರ್ಶನ ಸರಣಿ ಕಾರ್ಯಕ್ರಮ

ಉದ್ಘಾಟಿಸಿ ಮಾತನಾಡಿದರು. ಪೌರಾಣಿಕ ನಾಟಕಗಳು ಸಾಧಾರಣ ವ್ಯಕ್ತಿಯನ್ನು ಉತ್ತಮ ಪ್ರಜೆಯನ್ನಾಗಿ ರೂಪಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಪೌರಾಣಿಕ ನಾಟಕಗಳನ್ನು ಕಲಿತು ಪ್ರದರ್ಶಿಸುವುದು ದುಬಾರಿ ಎಂದು ಹಲವರು ಈ ರಂಗದಿಂದ ದೂರವಾಗಿದ್ದಾರೆ. ಯಾರು ಎಷ್ಟೇ ಸಹಾಯ ಮಾಡಿದರೂ ಕಲಾವಿದರೇ ಹಣ ತೊಡಗಿಸಬೇಕಾದ ಪರಿಸ್ಥಿತಿ ಇದೆ. ಆದರೆ ಪಟ್ಟಣದಲ್ಲಿ ಡಾ.ರಾಜ್‌ಕುಮಾರ್ ಕಲಾ ಸಂಘದವರು ಅತಿ ಕಡಿಮೆ ವೆಚ್ಚದಲ್ಲಿ ಕಲಾವಿದರಿಗೆ ಅವರವರ ನಾಟಕ ಪ್ರದರ್ಶಿಸಲು ಅವಕಾಶ ಕಲ್ಪಿಸಿರುವುದು ಶ್ಲಾಘನೀಯ ಎಂದು ಲೋಕೇಶ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net