ಪೌರಾಣಿಕ ನಾಟಕಗಳಿಂದ ಕಲೆ, ಸಾಹಿತ್ಯ ಜೀವಂತ

24Kush08
ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಅಳುವಾರ ಸಮೀಪದ ಭೈರಪ್ಪನಗುಡಿ ಗ್ರಾಮದಲ್ಲಿರುವ ಶ್ರೀ ಶನೈಶ್ಚರ ದೇವಾಲಯ ಸಮಿತಿ, ಶ್ರೀ ಭೈರವೇಶ್ವರ ಕೃಪಾ ಪೋಷಿತ ನಾಟಕ ಮಂಡಳಿ, ಡಾ.ಬಿ.ಆರ್.ಜೈಭೀಮ್ ಯುವಕ ಸಂಘದಿಂದ ಆಯೋಜಿಸಲಾಗಿದ್ದ ಶ್ರೀ ಶನಿಪ್ರಭಾವ ಅಥವಾ ರಾಜಾವಿಕ್ರಮ ಎಂಬ ಪೌರಾಣಿಕ ನಾಟಕವನ್ನು ಗ್ರಾ.ಪಂ. ಸದಸ್ಯ ಕೆ.ಬಿ.ದೇವರಾಜು ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷೆ ರೂಪಾ ಮಹೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಎಂ.ಎನ್.ಮಂಜುನಾಥ, ಅಳುವಾರದಮ್ಮ ದೇವಾಲಯ ಸಮಿತಿಯ ಉಪಾಧ್ಯಕ್ಷ ಸುಂದರ್, ಕಾರ್ಯದರ್ಶಿ ಎ.ಕೆ.ಸುರೇಶ ಇತರರಿದ್ದರು.
Published on

ಕುಶಾಲನಗರ: ಗ್ರಾಮಾಂತರ ಪ್ರದೇಶಗಳಲ್ಲಿ ಇಂದಿಗೂ ಪೌರಾಣಿಕ ನಾಟಕಗಳನ್ನು ಅಭಿನಯಿಸುವುದರಿಂದ ಕಲೆ ಮತ್ತು ಸಾಹಿತ್ಯ ಜೀವಂತವಾಗಿದೆ ಎಂದು ತೊರೆನೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೆ.ಬಿ.ದೇವರಾಜು ಅಭಿಪ್ರಾಯಪಟ್ಟರು.

ತೊರೆನೂರು ಗ್ರಾಪಂ ವ್ಯಾಪ್ತಿಯ ಭೈರಪ್ಪನಗುಡಿ ಗ್ರಾಮದಲ್ಲಿ ಶ್ರೀ ಶನೈಶ್ಚರ ದೇವಾಲಯ ಸಮಿತಿ, ಶ್ರೀ ಭೈರವೇಶ್ವರ ಕೃಪಾಪೋಷಿತ ನಾಟಕ ಮಂಡಳಿ, ಡಾ.ಬಿ.ಆರ್.ಜೈಭೀಮ್ ಯುವಕ ಸಂಘದಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ ಶ್ರೀ ಶನಿಪ್ರಭಾವ ಅಥವಾ ರಾಜಾವಿಕ್ರಮ ಎಂಬ ಪೌರಾಣಿಕ ನಾಟಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮುಂದಿನ ಪೀಳಿಗೆಗೆ ಇವುಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಇಂತಹ ಪೌರಾಣಿಕ ನಾಟಕಗಳು ಪೂರಕವಾಗುತ್ತವೆ. ಇಂತಹ ಅದ್ಭುತ ಕಲೆಯನ್ನು ಉಳಿಸಲು ಸರ್ಕಾರವು ಮುಂದಾಗಬೇಕು ಎಂದು ತಿಳಿಸಿದರು.

ತೊರೆನೂರು ಗ್ರಾಪಂ ಅಧ್ಯಕ್ಷೆ ರೂಪಾ ಮಹೇಶ್ ಮಾತನಾಡಿ, ಇಂದಿನ ಯುವ ಪೀಳಿಗೆ ಹೆಚ್ಚು ಮೊಬೈಲ್ ಬಳಕೆಯಿಂದಾಗಿ ಕಲೆಯ ಚಟುವಟಿಕೆಗಳು ಮೂಲೆ ಗುಂಪಾಗುತ್ತಿವೆ. ಕಲೆ ಗೊತ್ತಿರುವರು ಯುವ ಪೀಳಿಗೆಗೆ ಕಲೆಯ ಮಹತ್ವವನ್ನು ತಿಳಿಸಿ, ಜಾಗೃತಿ ಮೂಡಿಸಿ ಮತ್ತಷ್ಟು ಬೆಳೆಸಬೇಕು ಎಂದು ಸಲಹೆ ನೀಡಿದರು.

ಕಲಾ ಸಾಮ್ರಾಟ ಎ.ಆರ್.ಗಣೇಶ್ ಅಳುವಾರ ಪೌರಾಣಿಕ ನಾಟಕವನ್ನು ನಿರ್ದೇಶಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಎಂ.ಎನ್.ಮಂಜುನಾಥ, ಅಳುವಾರದಮ್ಮ ದೇವಾಲಯ ಸಮಿತಿಯ ಉಪಾಧ್ಯಕ್ಷ ಸುಂದರ್, ಕಾರ್ಯದರ್ಶಿ ಎ.ಕೆ.ಸುರೇಶ್, ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಶಿವಶಂಕರ, ಗ್ರಾಪಂ ಸದಸ್ಯರಾದ ಶೋಭಾ ಪ್ರಕಾಶ್, ನಿಂಗಾಜಮ್ಮ, ಸಹಕಾರ ಸಂಘದ ನಿರ್ದೇಶಕ ಶ್ರೀನಿವಾಸ್, ಅಳುವಾರದ ಕವಿತಾರಾಣಿ, ಸುತ್ತಮುತ್ತಲಿನ ಗ್ರಾಮಗಳ ಕಲಾಭಿಮಾನಿಗಳು ಪೌರಾಣಿಕ ನಾಟಕ ವೀಕ್ಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net