

ಕೆಂಭಾವಿ: ಪೌರಾಣಿಕ ಕಥೆಗಳನ್ನು ನಾಟಕದ ಮೂಲಕ ಜನರಿಗೆ ತೋರಿಸುವುದರಿಂದ ಭಕ್ತಿ ಶ್ರದ್ಧೆ ಜತೆಗೆ ಧಾರ್ಮಿಕ ಮನೋಭಾವ ಮೂಡಲು ಸಾಧ್ಯ ಎಂದು ನಿವೃತ್ತ ಶಿಕ್ಷಕ ಪ್ರಹ್ಲಾದಾಚಾರ್ಯ ಜೋಶಿ ಹೇಳಿದರು.
ಪಟ್ಟಣದ ಉತ್ತರಾದಿ ಮಠದಲ್ಲಿ ಮಂಗಳವಾರ ಜಯಸತ್ಯಪ್ರಮೋದ ಸೇವಾ ಸಂಘ ಹಾಗೂ ಕುಬೇರಾ ಸೇವಾ ಪ್ರತಿಷ್ಠಾನದಿಂದ ಪುರಂದರ ದಾಸರ ಆರಾಧನೆ ನಿಮಿತ್ತ ಸಂಜೆ ಹಮ್ಮಿಕೊಂಡ ದಾಸನಮನ ಕಾರ್ಯಕ್ರಮದಲ್ಲಿ ಮಕ್ಕಳ ನಾಟಕ ಉದ್ಘಾಟಿಸಿ ಮಾತನಾಡಿದರು.
ಮಹಾ ಭಾರತ ಮತ್ತು ರಾಮಾಯಣ ಕಥೆಗಳು ಪ್ರತಿಯೊಬ್ಬರ ಜೀವನ ಬದಲಿಸುವ ಶಕ್ತಿ ಹೊಂದಿದೆ. ಅಂತಹ ನೀತಿ ಕಥೆಗಳನ್ನು ಪಾತ್ರಗಳ ಮೂಲಕ ಜನಸಾಮನ್ಯರಿಗೆ ತಿಳಿಸಲು ಪರದೆಯ ಮೇಲೆ ನಟಿಸಿದಾಗ ಜನತೆಗೆ ಪೌರಾಣಿಕ ಕಥೆಗಳು ಇನ್ನಷ್ಟು ಹತ್ತಿರವಾಗುತ್ತವೆ ಎಂದರು.
ಜಯ ಸತ್ಯಪ್ರಮೋದ ಸೇವಾ ಸಂಘದ ಅಧ್ಯಕ್ಷ ವಾಮನರಾವ ದೇಶಪಾಂಡೆ ಮಾತನಾಡಿದರು. ಉಪಾಧ್ಯಕ್ಷ ಬಾಳಕೃಷ್ಣರಾವ ಕುಲಕರ್ಣಿ, ತಿರುಮಲಾಚಾರ್ಯ ಜೋಶಿ, ನರಸಿಂಹರಾವ ಕುಲಕರ್ಣಿ, ಕುಬೇರ ಸೇವಾ ಪ್ರತಿಷ್ಠಾನದ ಹಳ್ಳೇರಾವ ಕುಲಕರ್ಣಿ, ಹಣಮಂತರಾವ ಕುಲಕರ್ಣಿ, ಮೋಹನರಾವ ಕುಲಕರ್ಣಿ, ಮಲ್ಲಾರಾವ ಕುಲಕರ್ಣಿ ಇದ್ದರು. ವಿಜಯಾಚಾರ್ಯ ಪುರೋಹಿತ ನಿರೂಪಣೆ ಮಾಡಿದರು. ಪ್ರಮೋದ ಕುಲಕರ್ಣಿ ವಂದಿಸಿದರು.
ನಂತರ ಮಕ್ಕಳಿಂದ ನಡೆದ ರಾಮಾಯಣ ಪ್ರಸಂಗದ ಶಬರಿ ನಾಟಕ ನೆರೆದಿದ್ದ ಜನರನ್ನು ಮಂತ್ರಮುಗ್ಧರನ್ನಾಗಿಸಿತು. ವೇಣುಗೋಪಾಲ ದೇಶಪಾಂಡೆ, ವಾರುಣಿ ದೇಶಪಾಂಡೆ, ಜ್ಯೋತಿ ಕುಲಕರ್ಣಿ, ವಾತ್ಸಲ್ಯ, ಪಾವನಿ ಕುಲಕರ್ಣಿ ನಾಟಕದ ಪಾತ್ರವರ್ಗದಲ್ಲಿ ಮಿಂಚಿದರು. ಹಳ್ಳೇರಾವ ಕುಲಕರ್ಣಿ ಹಾಗೂ ವಾದಿರಾಜ ಕುಲಕರ್ಣಿ ವಾದ್ಯ ಸಂಗೀತ ಸಹಕಾರ ನೀಡಿದರು.