ಪೌರತ್ವ ತರಬೇತಿ ಅವಶ್ಯಕ

Jasmine B.Ed Citizenship Camp At Andoor budh vihar Photo
Published on

ಬೀದರ್: ಜೀವನ ದಾರಿ ಸುಗಮಕ್ಕೆ ಪೌರತ್ವ ತರಬೇತಿಯೂ ಶಿಕ್ಷಣದಷ್ಟೇ ಅವಶ್ಯಕವಾಗಿದೆ ಎಂದು ಭಂತೆ ಸಂಘರಖ್ಖಿತ ಅಭಿಪ್ರಾಯಪಟ್ಟರು.

ಜಾಸ್ಮಿನ್ ಶಿಕ್ಷಣ ಮಹಾವಿದ್ಯಾಲಯ ವತಿಯಿಂದ ಬೀದರ್ ತಾಲೂಕಿನ ಆಣದೂರು ಗ್ರಾಮದ ಬೌದ್ಧ ವಿಹಾರದಲ್ಲಿ ಆಯೋಜಿಸಿದ್ದ ಪೌರತ್ವ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ದೇಶದ ಪ್ರತಿಯೊಬ್ಬ ಪ್ರಜೆ ತನ್ನ ಹಕ್ಕು ಹಾಗೂ ಕರ್ತವ್ಯಗಳನ್ನು ಅರಿಯಬೇಕು ಎಂದು ತಿಳಿಸಿದರು.

ಮಕ್ಕಳು ದೇಶದ ಭಾವಿ ಪ್ರಜೆಗಳಾಗಿದ್ದಾರೆ. ಅವರನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ಗುರುತರವಾದ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಬಿಲಾಲ್ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಡಾ. ಮಹಮ್ಮದ್ ಹನಿಫ್ ಹೇಳಿದರು.

ಜಾಸ್ಮಿನ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಅಜಿಜ್ ಖಾನ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಎಂ.ಡಿ. ಅಝೀಮ್, ಉಪ ಪ್ರಾಚಾರ್ಯ ಸುನೀಲ್ ಮಾಳಗೆ, ಶಿಬಿರದ ವ್ಯವಸ್ಥಾಪಕ ಗೌತಮ ಕಸ್ತೂರೆ, ತೇಜಮ್ಮ, ದತ್ತು, ವಿಜಯಕುಮಾರ, ಸುದರ್ಶನ, ರಾಹುಲ್ ಇದ್ದರು. ಇಮ್ಯಾನುವೆಲ್ ನಿರೂಪಣೆ ಮಾಡಿದರು. ರತ್ನಕಲಾ ವಂದಿಸಿದರು.

ಶಿಬಿರದ ಪ್ರಯುಕ್ತ ಬಿ.ಎಡ್ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಗಳು ಬೌದ್ಧ ವಿಹಾರ ಹಾಗೂ ಗ್ರಾಮದ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net