ಪೌರಕಾರ್ಮಿಕರು ಗಣತಿಯಲ್ಲಿ ಭಾಗವಹಿಸಿ

Srinivas (Shiva)
Published on

ಚಾಮರಾಜನಗರ: ರಾಜ್ಯದಲ್ಲಿ ಒಳ ಮೀಸಲಾತಿ ವರ್ಗೀಕರಣದ ಸಂಬಂಧ ನಡೆಸಲಾಗುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ದತ್ತಾಂಶ ಸಮೀಕ್ಷೆಯಲ್ಲಿ ಸಾಯಿ ಕರ್ಮಚಾರಿಗಳು ಕಡ್ಡಾಯವಾಗಿ ಭಾಗವಹಿಸಿ ಎಂದು ರಾಜ್ಯ ಡಾ.ಬಿ.ಆರ್.ಅಂಬೇಡ್ಕರ್ ಆದಿದ್ರಾವಿಡ ಪೌರಕಾರ್ಮಿಕ ಯುವಕರ ಅಭಿವೃದ್ಧಿ ಸಂಘದ ಅಧ್ಯಕ್ಷ ಶ್ರೀನಿವಾಸ್ (ಶಿವು) ಮನವಿ ಮಾಡಿದರು.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ನ್ಯಾ.ಎಚ್.ಎಸ್.ನಾಗಮೋಹನ್ ದಾಸ್ ನೇತೃತ್ವದಲ್ಲಿ ಮೇ.5 ರಿಂದ ಎಸ್ಸಿ, ಎಸ್ಟಿ ದತ್ತಾಂಶ ಸಮೀಕ್ಷೆ ಪ್ರಾರಂಭವಾಗಲಿದೆ. ಈ ವೇಳೆ ಆದಿದ್ರಾವಿಡ ಸಮಾಜದ ಬಂಧುಗಳು, ಸಾಯಿ ಕರ್ಮಚಾರಿಗಳು, ಮ್ಯಾನುವಲ್ ಸ್ಕಾೃವೆಂಜರ್, ಸ್ವಚ್ಛತಾ ಚರ್ಮವನ್ನು ಹದಮಾಡಿ ಚಪ್ಪಲಿ ಹೊಲಿಯುವವರು, ಖಾಸಗಿ ವಲಯದಲ್ಲಿ ಶೌಚಾಲಯ ಶುಚಿ ಮಾಡುವ ಸ್ವಚ್ಛತಾ ಪೌರಕಾರ್ಮಿಕರು ಕಡ್ಡಾಯವಾಗಿ ಸಮೀಕ್ಷೆಯಲ್ಲಿ ಭಾಗವಹಿಸಿ ತಮ್ಮ ಮಾಹಿತಿಯನ್ನು ನೋಂದಾಯಿಸಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪರಿಶಿಷ್ಟ ಜಾತಿಗಳಿಗೆ ಸೇರಿದ 101 ಉಪಜಾತಿಗಳಲ್ಲಿ ಯಾವುದನ್ನೂ ಕೈಬಿಡುವುದಿಲ್ಲ ಎಂದು ಆಯೋಗ ತಿಳಿಸಿದೆ. ಆದ್ದರಿಂದ ಸಮಾಜದ ಬಂಧುಗಳು ನಮ್ಮ ಮೂಲ ಜಾತಿ ಆದಿದ್ರಾವಿಡ ಹಾಗೂ ಉಪಜಾತಿ ಮಾದಿಗ ಎಂದು ಬರೆಸಬೇಕಾಗಿದೆ. ಈ ಮೂಲಕ ಸಮಾಜವನ್ನು ಮುಖ್ಯವಾಹಿನಿಗೆ ತರಬೇಕಿದೆ ಎಂದರು.

ಗೋಷ್ಠಿಯಲ್ಲಿ ಸಂಘದ ಗೌರವ ಕಾರ್ಯದರ್ಶಿ ನಂಜಪ್ಪ ಕೆ.ಬಸವನಗುಡಿ, ಪದಾಧಿಕಾರಿಗಳಾದ ಡಿ.ಆರ್.ರಾಜು, ತಂಗಮ್ಮ, ಸಂಗೀತ, ದೊಡ್ಡಮಾದಮ್ಮ, ನಂದಿನಿ, ಭಾಗ್ಯ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net