ಪೌರಕಾರ್ಮಿಕರ ಹಿತ ಕಾಯುವುದೇ ಸಂಘದ ಗುರಿ

IMG-20241107-WA0007
Published on

ಚಾಮರಾಜನಗರ: ಕರ್ನಾಟಕ ರಾಜ್ಯ ಪೌರಕಾರ್ಮಿಕರ ಸಂಘದ 3 ನೇ ವರ್ಷದ ವಾರ್ಷಿಕೋತ್ಸವ ನಗರದ ಜಿಲ್ಲಾಡಳಿತ ‌ಭವನದ ಹಳೆಯ ಕೆಡಿಪಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ನೂತನ ಮಹಿಳಾ ಘಟಕ ಸ್ಥಾಪಿಸಿ ರಾಜ್ಯಾಧ್ಯಕ್ಷೆಯಾಗಿ ತಂಗಮ್ಮ, ಕಾರ್ಯದರ್ಶಿಯಾಗಿ ಉಮಾದ್ರಾವಿಡನ್, ಕಾರ್ಯಾಧ್ಯಕ್ಷರಾಗಿ ಪಾರ್ವತಿ, ಹಾಗೂ ರಾಜ್ಯ ಉಪಾಧ್ಯಕ್ಷರಾಗಿ ಬೆಂಗಳೂರು ಮುತಾಲಮ್ಮ, ಮೈಸೂರು ನಗರ ಘಟಕ ಅಧ್ಯಕ್ಷರಾಗಿ ಬಹದ್ದೂರ್ ಕೃಷ್ಣ, ರಾಜ್ಯ ಉಪಾಧ್ಯಕ್ಷರಾಗಿ ವಿಜಯಕುಮಾರ್ ಆರ್, ಕೊಡುಗು ಜಿಲ್ಲಾಧ್ಯಕ್ಷರಾಗಿ ಪರಮೇಶ್, ಎಚ್.ಡಿ ಕೋಟೆ ತಾಲೂಕು ಅಧ್ಯಕ್ಷರಾಗಿ ಪರಶುರಾಮು ನೇಮಕಗೊಂಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಪೌರಕಾರ್ಮಿಕರ ರಾಜ್ಯಾಧ್ಯಕ್ಷ ಡಿ.ಆರ್.ರಾಜು ಮಾತನಾಡಿ,ಕರ್ನಾಟಕ ರಾಜ್ಯ ಪೌರ ಕಾರ್ಮಿಕರ ಸಂಘ ಸ್ಥಾಪನೆಗೊಂಡು ಇಂದು 3 ನೇ ವರ್ಷ ವಾರ್ಷಿಕೋತ್ಸವ ಆಚರಿಸಿಕೊಂಡಿದೆ. ಕಳೆದ ಮೂರು ವರ್ಷದಿಂದ ಸಂಘವು ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸುವ ಪೌರಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತದೆ ಅಲ್ಲದೆ.   ನೊಂದ ಕಾರ್ಮಿಕರು ಪರ ಕೆಲಸ ಮಾಡಿ ಪೌರಕಾರ್ಮಿಕರ ಹಿತ ಕಾಯುವುದು ಸಂಘದ ಮುಖ್ಯ ಉದ್ದೇಶವಾಗಿದೆ ಎಂದರು.

ಜಿಲ್ಲಾಧ್ಯಕ್ಷ ಹೊನ್ನೂರು ಆರ್ಮುಗಂ ಮಾತನಾಡಿ, ಜಿಲ್ಲೆಯಲ್ಲಿ ಸಮಗ್ರವಾಗಿ ಮ್ಯಾನುವಲ್ ಸ್ಕ್ಯಾವೆಂಜಿಗ್ ವೃತ್ತಿಯಲ್ಲಿ ತೊಡಗಿಕೊಂಡಿದ್ದವರ ಸಮೀಕ್ಷೆ ಆಗಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನಕಾರ್ಯದರ್ಶಿ ವೈ.ಕೆ.ಪಳನಿ, ಉಪಾಧ್ಯಕ್ಷ ಕುಮಾರ್ ಕರಿನಂಜನಪುರ,  ಆಲೂರು ವಿಜಯ್, ಮಾದಾಪುರ ರಂಗಸ್ವಾಮಿ, ಸತೀಶ್, ಮರಿಯಾಲ‌ಬಣ್ಣಾರಿ, ಗುಂಬಳ್ಳಿ ಪಳನಿಯಮ್ಮ, ಗಣೇಶ, ಆರ್.ನಾಗರಾಜು, ಪಿ.ಬಾಲಸುಬ್ರಹ್ಮಣ್ಯಂ, ಮಹದೇಶ್ವರ ಬೆಟ್ಟ ಮುರುಗೇಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net