ಪೌರಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಿ

IMG-20200712-WA0033
Published on

ಗೌರಿಬಿದನೂರು: ಕರೊನಾ ಸಂಕಷ್ಟದ ಸಮಯದಲ್ಲೂ ಸ್ವಚ್ಛತಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಪೌರಕಾರ್ಮಿಕರ ಕಷ್ಟಗಳಿಗೆ ಸಮಾಜ, ಸರ್ಕಾರ ಸ್ಪಂದಿಸಬೇಕು ಎಂದು ನಗರಸಭೆ ಸದಸ್ಯ ಆರ್.ಸಪ್ತಗಿರಿ ಮನವಿ ಮಾಡಿದರು.

ಕೆ.ಎಚ್. ಪುಟ್ಟಸ್ವಾಮಿಗೌಡ ಫೌಂಡೇಷನ್‌ನಿಂದ ಭಾನುವಾರ ನಗರದಲ್ಲಿ 90 ಪೌರಕಾರ್ಮಿಕರಿಗೆ ಜರ್ಕಿನ್ ವಿತರಿಸಿ ಮಾತನಾಡಿದರು.ಬಿಸಿಲು, ಮಳೆ, ಚಳಿ ಲೆಕ್ಕಿಸದೆ ಪೌರಕಾರ್ಮಿಕರು ನಗರದ ಸ್ವಚ್ಛತೆಗೆ ಶ್ರಮಪಡುತ್ತಿದ್ದಾರೆ. ಅವರ ಶ್ರಮಕ್ಕೆ ಬೆಲೆ ಕಟ್ಟಲಾಗದು. ಇಂತಹ ಶ್ರಮಜೀವಿಗಳನ್ನು ಗುರುತಿಸಿ ಗೌರವಿಸಬೇಕು ಎಂದರು.

ನಗರಸಭೆ ಸದಸ್ಯರಾದ ರಾಜಕುಮಾರ್, ಫರೀದ್, ಆರೋಗ್ಯ ನಿರೀಕ್ಷಕ ಬಿ. ಸುರೇಶ್, ಮಾಜಿ ಸದಸ್ಯ ಕೆ.ಎಸ್.ಅನಂತರಾಜು, ಮುಖಂಡರಾದ ಅಲ್ತ್ಾ, ಸಲೀಂ, ಪವನ್ ರೆಡ್ಡಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net