ಪೌರಕಾರ್ಮಿಕರ ಶ್ರಮದಿಂದ ಸ್ವಚ್ಛತೆ, ಆರೋಗ್ಯ ರಕ್ಷಣೆ

MDG labour
ಮೂಡಿಗೆರೆ ಪಪಂನಲ್ಲಿ ಪೌರಕಾರ್ಮಿಕರ ದಿನ ಆಚರಿಸಲಾಯಿತು. ಪಪಂ ಅಧ್ಯಕ್ಷ ಕೆ.ವೆಂಕಟೇಶ್, ಹೊಸಕೆರೆ ರಮೇಶ್, ಎಂ.ಎ.ಕಮಲಮ್ಮ, ನಾಗಮ್ಮ, ಧನಲಕ್ಷ್ಮೀ ಇತರರಿದ್ದರು.
Published on

ಮೂಡಿಗೆರೆ: ಪೌರಕಾರ್ಮಿಕರು ಹೆಚ್ಚು ಶ್ರಮವಹಿಸಿ ಕರ್ತವ್ಯ ನಿರ್ವಹಿಸುವುದರಿಂದ ಸಮಾಜವನ್ನು ಸುಂದರಗೊಳಿಸುವ ಜತೆಗೆ ಜನರ ಆರೋಗ್ಯ ಕಾಪಾಡುತ್ತಿದ್ದಾರೆ ಎಂದು ಪಪಂ ಅಧ್ಯಕ್ಷ ಕೆ.ವೆಂಕಟೇಶ್ ತಿಳಿಸಿದರು.

ಪೌರಕಾರ್ಮಿಕರ ಸಂಘದಿಂದ ಪಪಂ ಕಚೇರಿಯಲ್ಲಿ ಬುಧವಾರ ನಡೆದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದರು. ಪೌರಕಾರ್ಮಿಕರು ಮತ್ತು ನೀರುಗಂಟಿಗಳ ಶ್ರಮದಿಂದ ಪಟ್ಟಣದ ಜನ ನೆಮ್ಮದಿಯಿಂದ ಬದುಕುವಂತಾಗಿದೆ. ನೀರುಗಂಟಿಗಳು ದಿನವಿಡೀ ಕರ್ತವ್ಯ ನಿರ್ವಹಿಸುವುದರಿಂದ ಜನತೆಗೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವುದಿಲ್ಲ ಎಂದು ತಿಳಿಸಿದರು.

ಪಪಂ ಸದಸ್ಯ ಸುಧೀರ್ ಮಾತನಾಡಿ, ಪಟ್ಟಣದ ಬಸ್ ನಿಲ್ದಾಣದ ಆವರಣ, ಅಂಬೇಡ್ಕರ್ ಭವನದ ಮುಂಭಾಗ, ಬಿಎಸ್‌ಎನ್‌ಎಲ್ ಕಚೇರಿ ಮುಂಭಾಗ ಸೇರಿದಂತೆ ಹಲವು ಕಡೆ ಜನರು ಕಸ ಸುರಿಯುತ್ತಿರುವುದು ಸರಿಯಲ್ಲ. ಕಸವನ್ನು ಅಲ್ಲಲ್ಲಿ ಸುರಿಯುವುದರಿಂದ ಪರಿಸರ ಹಾಳಾಗುವ ಜತೆಗೆ ಸಾಂಕ್ರಾಮಿಕ ರೋಗ ಹರಡುತ್ತದೆ ಎಂದರು.

ಪೌರಕಾರ್ಮಿಕರು ಕಸ ತೆರವುಗೊಳಿಸಲು ಹರಸಾಹಸ ಪಡಬೇಕಾಗುತ್ತದೆ. ಕೆಲವರು ಪೌರಕಾರ್ಮಿಕರ ಮೇಲೆ ದಬ್ಬಾಳಿಕೆ ನಡೆಸುವುದು ಸರಿಯಲ್ಲ. ಪೌರಕಾರ್ಮಿಕರು ಮತ್ತು ನೀರುಗಂಟಿಗಳಿಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಪೌರಕಾರ್ಮಿಕರ ಸಂಘದ ಅಧ್ಯಕ್ಷ ಅಣ್ಣಾದೊರೆ, ಕುಮಾರ, ಧನಲಕ್ಷ್ಮೀ, ನಾಗಮ್ಮ, ನಾರಾಯಣಮ್ಮ ಅವರನ್ನು ಸನ್ಮಾನಿಸಲಾಯಿತು.

ಪಪಂ ಉಪಾಧ್ಯಕ್ಷ ಹೊಸಕೆರೆ ರಮೇಶ್, ಸದಸ್ಯರಾದ ಪಿ.ಜಿ.ಅನುಕುಮಾರ್, ಎಂ.ಎ.ಹಂಝ, ಕಮಲಮ್ಮ, ಮನೋಜ್‌ಕುಮಾರ್, ಅಜ್ಮಲ್, ಆರೋಗ್ಯ ನಿರೀಕ್ಷಕ ಕೃಷ್ಣಯ್ಯ, ರಾಮ ಶೆಟ್ಟಿ, ಸಿಬ್ಬಂದಿ ಮುನಿಯಪ್ಪ, ಹರೀಶ್, ಆನಂದ, ಶಂಕರ್, ಲೋಕೇಶ್, ಪುಟ್ಟಸ್ವಾಮಿ, ನಾಗಮ್ಮ, ರಮೇಶ್, ನಾರಾಯಣಮ್ಮ, ರಾಜಶೇಖರ್, ಚಂದ್ರು, ಸುರೇಶ್, ರವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net