

ಕುಡಚಿ: ಪೌರಕಾರ್ಮಿಕರ ಬೇಡಿಕೆ ಈಡೇರಿಸಲು ಸಾಧ್ಯವಾದಷ್ಟು ಪ್ರಯತ್ನಿಸುತ್ತೇವೆ ಎಂದು ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು.
ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಗೃಹಭಾಗ್ಯ ಯೋಜನೆಯಡಿ ಆಯ್ಕೆಯಾದ ೧೩ ಜನ ಪೌರಕಾರ್ಮಿಕರಿಗೆ ಈಚೆಗೆ ಮನೆ ಆದೇಶ ಪತ್ರ ಹಾಗೂ ಆರೋಗ್ಯ ಸುರಕ್ಷಾ ಪರಿಕರ ಕಿಟ್ ವಿತರಿಸಿ ಮಾತನಾಡಿದರು.
ಪುರಸಭೆ ಅಧ್ಯಕ್ಷ ಹಮಿದೋದ್ದಿನ್ ರೋಹಿಲೆ ಮಾತನಾಡಿದರು. ಪೌರ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಸುಖದೇವ ಶಿಂಧೆ ಮಾತನಾಡಿದರು.
ಪುರಸಭೆ ಉಪಾಧ್ಯಕ್ಷ ಶಿವಪ್ಪ ಗಸ್ತಿ, ಮುಖ್ಯಾಧಿಕಾರಿ ಬಾಬಾಸಾಹೇಬ ಮಾನೆ, ಸಾಧಿಕ್ ಸಜ್ಜನ, ಸಾಕಿಫ್ ಪಾಳೆಗಾರ, ಸಾಽಕ್ ರೋಹಿಲೆ, ಮುಷ್ಪಕ್ ಜಿನ್ನಾಬಡೆ, ಅಭಿಯಂತ ಎಸ್.ಆರ್.ಚೌಗಲಾ, ಎಸ್.ಬಿ. ಕದಂ, ಅಬೀದ್ ರೋಹಿಲೆ, ಭಾಗ್ಯಶ್ರೀ ಹೇರೂರ, ವೈ.ಆರ್. ಯಲ್ಲಟ್ಟಿ, ಸತೀಶ ನಡೋಣಿ ಇತರರು ಇದ್ದರು.