ಪೌರ ಕಾರ್ಮಿಕರು, ನೀರುಗಂಟಿಗಳಿಗೆ ಸನ್ಮಾನ

27sunti01
Published on

ಸುಂಟಿಕೊಪ್ಪ: ಪಟ್ಟಣ ಮತ್ತು ದೊಡ್ಡ ಗ್ರಾಮ ಪಂಚಾಯಿತಿಗಳು ಸ್ವಚ್ಛತೆ ಹಾಗೂ ಆರೋಗ್ಯವಂತಾಗಿರಬೇಕೆಂದರೆ ಪೌರಕಾರ್ಮಿಕರು ನಿರ್ವಹಿಸುವ ಕೆಲಸವೇ ಅನನ್ಯವಾದುದು, ನಾವು ಅವರು ನಿರ್ವಹಿಸುವ ಕಾರ್ಯವನ್ನು ನಿರ್ವಹಿಸಲು ಸಾಧ್ಯವಿಲ್ಲವೆಂದು ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ತಿಳಿಸಿದರು.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಪೌರ ಕಾರ್ಮಿಕರು ಹಾಗೂ ನೀರುಗಂಟಿಗಳಿಗೆ ಶನಿವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಪೌರಕಾರ್ಮಿಕರು ಹಾಗೂ ನೀರುಗಂಟಿಗಳು ಕರ್ತವ್ಯ ನಿರ್ವಹಿಸದಿದ್ದರೆ ಗ್ರಾಮದ ಸ್ವಚ್ಛತೆ ಹಾಗೂ ನಾವು ಆರೋಗ್ಯವಂತರಾಗಿ ಇರಲು ಸಾಧ್ಯವೇ ಇಲ್ಲವೆಂದು ಅವರು ಹೇಳಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್ ಮಾತನಾಡಿ, ಪಟ್ಟಣ ಪ್ರದೇಶಕ್ಕೆ ಹತ್ತಿರವಾಗಿರುವ ದೊಡ್ಡ ಗ್ರಾಮ ಪಂಚಾಯಿಗಳಲ್ಲಿ ಪೌರಕಾರ್ಮಿಕರ ಅವಿರತ ಪರಿಶ್ರಮದಿಂದ ನೈರ್ಮಲ್ಯಮುಕ್ತ ಪ್ರದೇಶವನ್ನಾಗಿ ದೈನಂದಿನ ಸೇವೆಯಿಂದಾಗಿ ಪ್ರತಿ ಬಡಾವಣೆಗಳು ಸ್ವಚ್ಛಂದವಾಗಿ ಕಾಣುತ್ತಿವೆ. ಆದರೆ ಪೌರಕಾರ್ಮಿಕರನ್ನು ಕಡೆಗಣಿಸದೆ ಗೌರವಯುತ್ತವಾಗಿ ನಡೆಸಿಕೊಳ್ಳಬೇಕಿದೆ ಎಂದರು.

ಪಂಚಾಯಿತಿ ಪೌರಕಾರ್ಮಿಕರು ಹಾಗೂ ನೀರು ಗಂಟಿಗಳಾದ ಸಪಾಯಿ ಕರ್ಮಚಾರಿ ಸಂಘದ ಜಿಲ್ಲಾಧ್ಯಕ್ಷ ರಂಗಸ್ವಾಮಿ, ರಂಗಸ್ವಾಮಿ, ವೀರಭದ್ರ, ಮಣಿಕಂಠ, ಮುನಿಸ್ವಾಮಿ, ರಾಮಚಂದ್ರ, ವಿಶ್ವ, ರವಿ, ರಾಜ, ಮುರುಗೇಶ್, ರಮೇಶ ಅವರನ್ನು ಸನ್ಮಾನಿಸಲಾಯಿತು.

ಸುಂಟಿಕೊಪ್ಪ ಗ್ರಾಪಂ ಉಪಾಧ್ಯಕ್ಷೆ ಶಿವಮ್ಮ, ಸದಸ್ಯರಾದ ರಫೀಕ್‌ಖಾನ್, ಆಲಿಕುಟ್ಟಿ, ಶಬ್ಬೀರ್, ಪ್ರಸಾದ್‌ಕುಟ್ಟಪ್ಪ, ಪಿ.ಎಫ್.ಸಬಾಸ್ಟೀನ್, ಶಾಂತಿ, ಮಂಜುಳಾ (ರಾಸಥಿ),ವಸಂತಿ, ಪಂಚಾಯಿತಿ ಅಧಿಕಾರಿ ವಿ.ಜಿ.ಲೋಕೇಶ್, ಪಂಚಾಯಿತಿ ಸಿಬ್ಬಂದಿ, ಲೆಕ್ಕ ಪರಿಶೋಧಕಿ ಚಂದ್ರಕಲಾ, ಕರ ವಸೂಲಿಗಾರ ಶ್ರೀನಿವಾಸ್, ಗಣಕಯಂತ್ರ ಸಿಬ್ಬಂದಿ ಡಿ.ಎಂ.ಮಂಜುನಾಥ್, ಸಂಧ್ಯಾ, ಬಿಆರ್‌ಡಬ್ಲುೃಒ ಮಂದಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net