

ಬಾದಾಮಿ:ಪ್ರತಿಯೊಬ್ಬರು ಕಣ್ಣಿನ ತೊಂದರೆಯನ್ನು ರ್ನಿಲಕ್ಷಿಸದೆ ಪರಿಣಿತ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಪುರಸಭೆ ಅಧ್ಯಕ್ಷ ಪಾಂಡಪ್ಪ ಕಟ್ಟಿಮನಿ ಹೇಳಿದರು.ಪುರಸಭೆ ಸಭಾ ಭವನದಲ್ಲಿ ಸೋಮವಾರ ಪೌರ ಕಾರ್ಮಿಕರ ಹಾಗೂ ವಿಶ್ವ ದೃಷ್ಟಿ ದಿನಾಚರಣೆ ಅಂಗವಾಗಿ ಎಸ್.ಜಿ.ಎಂ. ನೇತ್ರ ಭಂಡಾರ ಹಾಗೂ ಸಂಶೋಧನಾ ಸಂಸ್ಥೆ ಮತ್ತು ಹುಬ್ಬಳ್ಳಿಯ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ದೃಷ್ಟಿ ಕೇಂದ್ರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನೇತ್ರ ತಪಾಸಣೆ ಉಚಿತ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ನೇತ್ರ ಮನುಷ್ಯನ ಪ್ರಮುಖ ಅಂಗವಾಗಿದ್ದು, ನಿತ್ಯ ಕಾಯಕದೊಂದಿಗೆ ಆರೋಗ್ಯ ರಕ್ಷಣೆಯನ್ನೂ ಮಾಡಿಕೊಳ್ಳಬೇಕು. ಪೌರಕಾರ್ಮಿಕರಿಗೆ ಉಚಿತ ತಪಾಸಣೆ ಶಿಬಿರ ಹಮ್ಮಿಕೊಂಡಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.ಮುಖ್ಯಾಧಿಕಾರಿ ಬಂದೆನವಾಜ ಡಾಂಗೆ ಮಾತನಾಡಿ, ಪುರಸಭೆಯಲ್ಲಿ 44 ಸ್ವಚ್ಛತೆ, 22 ನೀರು ಸರಬರಾಜು ಮತ್ತು 13 ಜನ ಚಾಲಕರು, ಇತರೆ ಸಿಬ್ಬಂದಿ ಸೇರಿ ಒಟ್ಟು 80ಕ್ಕೂ ಅಧಿಕ ಜನರ ನೇತ್ರ ತಪಾಸಣೆ ಮಾಡಿಸಿ, ಅವಶ್ಯವಿದ್ದವರಿಗೆ ಕನ್ನಡಕ ಕೊಡಿಸುವುದರ ಜೊತೆಗೆ ಕಣ್ಣಿನ ಶಸಚಿಕಿತ್ಸೆಗೆ ಕೂಡಾ ಅವಕಾಶ ಮಾಡಿಕೊಡಲಾಗಿದೆ ಎಂದರು.
ಸದಸ್ಯರಾದ ನಾಗರಾಜ ಕಾಚಟ್ಟಿ, ಶಂಕರ ಕನಕಗಿರಿ, ಮಕ್ತುಂ ತಾಂಬೂಳೆ, ರಾಜಮಹ್ಮದ ಬಾಗವಾನ, ರೆಹಮಾನ ಕೆರಕಲಮಟ್ಟಿ, ರಾಜೂರ, ಅಶೋಕ ಯಲಿಗಾರ, ಕೆರಿಹೊಲದ, ಇತರರಿದ್ದರು. ಎಸ್.ಎಸ್. ಶಿರಸಿ ನಿರೂಪಿಸಿದರು.
* ಚಿತ್ರರ್ಶಿಷಿಕೆ: 13ಬಿಡಿಎಂ1
ಬಾದಾಮಿ ಪುರಸಭೆಯಲ್ಲಿ ಪೌರ ಕಾರ್ಮಿಕರ ದಿನಾಚರಣೆ ನಿಮಿತ್ತ ಕಾರ್ಮಿಕರಿಗೆ ನೇತ್ರ ಉಚಿತ ತಪಾಸಣೆ ಶಿಬಿರ ಜರುಗಿತು. ಪುರಸಭೆ ಅಧ್ಯ ಪಾಂಡಪ್ಪ ಕಟ್ಟಿಮನಿ, ಸದಸ್ಯರಾದ ನಾಗರಾಜ ಕಾಚಟ್ಟಿ, ತಾಂಬೂಳೆ, ಕನಕಗಿರಿ, ಮುಖ್ಯಾ-ಧಿಕಾರಿ ಬಿ.ಎಂ. ಡಾಂಗೆ ಇದ್ದಾರೆ.