ಪೌರ ಕಾರ್ಮಿಕರಿಂದ ಅಂಬೇಡ್ಕರ್ ಜಯಂತಿ

Jagaluru, Ambedkar Putthali, Construction,
Published on

ಕಲಬುರಗಿ: ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಸಂಘದಿAದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ೧೩೧ನೇ ಜಯಂತ್ಯುತ್ಸವ ನಿಮಿತ್ತ ಟೌನ್‌ಹಾಲ್‌ನ ಇಂದಿರಾ ಸ್ಮಾರಕ ಭವನದಲ್ಲಿ ಏ.೧೪ರವರೆಗೆ ನಿತ್ಯ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯP್ಷÀ ಅನೀಲಕುಮಾರ ನರೋಣಾ ತಿಳಿಸಿದರು. ಶುಕ್ರವಾರ ಬೆಳಗ್ಗೆ ೧೦ಕ್ಕೆ ಡಾ.ಅಂಬೇಡ್ಕರ್ ಜೀವನ ಮತ್ತು ಸಾಧನೆ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದು, ರಾಜಪ್ಪ ಕಟ್ಟಿಮನಿ ಉದ್ಘಾಟಿಸಲಿದ್ದು, ಶರಣಕುಮಾರ ಟೆಂಗಳಿ ಅಧ್ಯP್ಷÀತೆ ವಹಿಸುವರು. ೧೪ರಂದು ಬೆಳಗ್ಗೆ ೮ಕ್ಕೆ ೧೩೩ ಪೌರ ಕಾರ್ಮಿಕರಿಂದ ರಕ್ತದಾನ ಶಿಬಿರ ನಡೆಯಲಿದ್ದು, ಪಾಲಿಕೆ ಎಇಇ ಸುಷ್ಮಾ ಆರ್. ಚಾಲನೆ ನೀಡುವರು ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಶಿಬಿರದ ನಂತರ ಬಿಕ್ಕುಣಿ ಸುಮನ್ ಸಾನ್ನಿಧ್ಯದಲ್ಲಿ ಬಹಿರಂಗ ಸಭೆಯನ್ನು ಜಿ¯್ಲÁಧಿಕಾರಿ ಬಿ.ಫೌಜಿಯಾ ತರನ್ನುಮï ಉದ್ಘಾಟಿಸುವರು. ಪಾಲಿಕೆ ಆಯುಕ್ತ ಭುವನೇಶ ಪಾಟೀಲï ಅಧ್ಯP್ಷÀತೆ ವಹಿಸಲಿದ್ದು, ಕನ್ನಡ ಸಲಹಾ ಸಮಿತಿ ಸದಸ್ಯೆ ಡಾ.ಜಯದೇವಿ ಗಾಯಕವಾಡ ಭಾಷಣಕಾರರಾಗಿರುವರು. ಎಲ್ಲರೂ ಪಾಲ್ಗೊಳ್ಳಬೇಕು ಎಂದು ಕೋರಿದರು.
ಶರಣು ಅತನೂರ, ಪ್ರೇಮಚಂದ ಶೀಲ್ಡï, ಪ್ರದೀಪ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net