ಪೌರ ಕಾರ್ಮಿಕರ ಸೇವೆ ಶ್ಲಾಘನೀಯ

ydg03
Published on

ಸುರಪುರ: ನಗರದ ಸ್ವಚ್ಛತೆ, ನೀರು ಸರಬರಾಜು, ಬೀದಿ ದೀಪಗಳ ನಿರ್ವಹಣೆಯಲ್ಲಿ ಅವಿರತ ಶ್ರಮ ವಹಿಸುತ್ತಿರುವ ಪೌರ ಕಾರ್ಮಿಕರ ಸೇವೆ ಶಾಘ್ಲನೀಯವಾಗಿದೆ ಎಂದು ನಗರಸಭೆ ಅಧ್ಯಕ್ಷೆ ಹೀನಾಕೌಸರ್ ಶಕೀಲ್ ಅಹ್ಮದ್ ಹೇಳಿದರು.

ಇಲ್ಲಿನ ನಗರಸಭೆಯಲ್ಲಿ ಸೋಮವಾರ ಹಮ್ಮಿಕೊಂಡ ಪೌರ ಕಾರ್ಮಿಕರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಬೆಳ್ಳಂ ಬೆಳಗ್ಗೆ ಎದ್ದು ನಗರದ ಸ್ವಚ್ಛತೆ ಸೇರಿ ಸಾರ್ವಜನಿಕರಿಗೆ ಹಲವು ಮೂಲಸೌಕರ್ಯ ಒದಗಿಸುವ ಸೇವೆಗೆ ಯಾರು ಬೆಲೆ ಕಟ್ಟಲಾಗದು ಎಂದರು.

ಉಪಾಧ್ಯಕ್ಷ ರಾಜಾ ಪಿಡ್ಡ ನಾಯಕ (ತಾತಾ) ಮಾತನಾಡಿ, ನಗರ ನಿವಾಸಿಗಳ ಆರೋಗ್ಯ ಕಾಪಾಡುವವರೇ ಪೌರ ಕಾರ್ಮಿಕರು. ಅದರಂತೆ ಪೌರ ಕಾರ್ಮಿಕರ ಆರೋಗ್ಯವೂ ಕೂಡ ಅಷ್ಟೆ ಮುಖ್ಯವಾಗಿದೆ. ಹೀಗಾಗಿ ಸರ್ಕಾರದಿಂದ ನೀಡುವ ಕೈಗವಚ, ಶೂಗಳನ್ನು ಕೆಲಸದ ವೇಳೆ ಕಡ್ಡಾಯವಾಗಿ ಬಳಸಬೇಕು ಎಂದು ಹೇಳಿದರು.

ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ ಡೊಣ್ಣಿಗೇರಾ ಮಾತನಾಡಿದರು. ಪೌರ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷೆ ಶಿವಲೀಲಮ್ಮ, ಉಪಾಧ್ಯಕ್ಷ ಪಂಪಾಪತಿ ಅವರನ್ನು ಸನ್ಮಾನಿಸಲಾಯಿತು. ನಂತರ ವಿವಿಧ ಬೇಡಿಕೆ ಈಡೇರಿಸುವಂತೆ ಪೌರಕಾರ್ಮಿಕರು ಮನವಿಪತ್ರವನ್ನು ಅಧ್ಯಕ್ಷರಿಗೆ ಸಲ್ಲಿಸಿದರು.


ಸದಸ್ಯರಾದ ಮೆಹಬೂಬ್ ಸಾಬ್, ಶಿವಕುಮಾರ ಕಟ್ಟಿಮನಿ, ಮಹಮದ್ ಗೌಸ್ ಕಿಣ್ಣಿ, ಎಇಇ ಶಾಂತಪ್ಪ ಹೊಸೂರ, ಜೆಇ ಮಹೇಶ, ದುರ್ಗಪ್ಪ ನಾಯಕ, ಪೌರ ಕಾರ್ಮಿಕ ಸಂಘದ ಜಿಲ್ಲಾ ಕಾರ್ಯದರ್ಶಿ ಪರಮಾನಂದ ದರ್ಶನಕರ, ಆರೋಗ್ಯ ನಿರೀಕ್ಷಕರಾದ ಗುರುಸ್ವಾಮಿ, ಹಣಮಂತ ಯಾದವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net