

ಶಿಕಾರಿಪುರ: ಪೌರ ಕಾರ್ಮಿಕರ ಸೇವೆ ಅನನ್ಯ. ಅವರ ಪರಿಶ್ರಮದಿಂದ ಶಿಕಾರಿಪುರ ಸ್ವಚ್ಛ ಸುಂದರ ಪಟ್ಟಣವಾಗಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ನಗರದ ಪುರಸಭೆಯಲ್ಲಿ ಗುರುವಾರ ಏರ್ಪಡಿಸಿದ್ದ ಪೌರಕಾರ್ಮಿಕ ದಿನಾಚರಣೆ ಉದ್ಘಾಟಿಸಿದ ಅವರು, ಪೌರಕಾರ್ಮಿಕರನ್ನು ನಾವು ಎಷ್ಟು ಸ್ಮರಿಸಿದರೂ ಸಾಲದು. ಕರೊನಾದಂತಹ ಸಂಕಷ್ಟದ ಸಮಯದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಕೆಲಸ ಮಾಡಿದವರು. 16 ಜನ ನೇರ ಪಾವತಿ ಪೌರಕಾರ್ಮಿಕರಿಗೆ ಖಾಯಂ ಆದೇಶ ವಿತರಿಸಲು ನನಗೆ ಸಂತಸ ಎನಿಸುತ್ತದೆ. ಅವರು ತಮ್ಮ ಆರೋಗ್ಯದ ಕಡೆಗೂ ಗಮನ ಹರಿಸಬೇಕು ಎಂದರು.
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ಪುರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರು ತಮ್ಮ ಸುರಕ್ಷತೆಯ ಕಡೆಗೂ ಗಮನ ಹರಿಸಬೇಕು. ನನಗೆ ರಾಜಕೀಯದ ಯಶಸ್ಸಿನ ಪಥವನ್ನು ತೋರಿದ್ದು ಪುರಸಭೆ. ನಮ್ಮ ರಾಜಕೀಯ ಆರಂಭವಾಗಿದ್ದೇ ಪುರಸಭೆಯಿಂದ ಎಂದರು.
ಪೌರ ಕಾರ್ಮಿಕರ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪುರಸಭೆಯ ಕಸ ವಿಲೇವಾರಿ ನೂತನ ವಾಹನಕ್ಕೆ ಚಾಲನೆ ನೀಡಲಾಯಿತು.
ಸಾಗರ ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ, ಪುರಸಭೆಯ ಸದಸ್ಯರಾದ ಪಾಲಾಕ್ಷಪ್ಪ, ರೇಣುಕಾ ಸ್ವಾಮಿ, ಲಕ್ಷ್ಮೀ ಮಹಾಲಿಂಗಪ್ಪ, ಸುನಂದಾ ಮಂಜುನಾಥ, ಶೈಲಾ ಯೋಗೀಶ್, ಜೀನಳ್ಳಿ ಪ್ರಶಾಂತ್, ರೂಪಕಲಾ ಹೆಗಡೆ, ಉಮಾವತಿ, ಮಯೂರ್ ದರ್ಶನ್, ರೂಪಾ ಮಂಜುನಾಥ್, ಮೊಹಮ್ಮದ್ ದಸ್ತಗಿರ್, ಪುರಸಭೆ ಮಾಜಿ ಅಧ್ಯಕ್ಷರಾದ ಟಿ.ಎಸ್.ಮೋಹನ್, ಎಂ.ಬಿ.ಚೆನ್ನವೀರಪ್ಪ, ಮುಖ್ಯಾಧಿಕಾರಿ ಭರತ್, ರಾಜಕುಮಾರ್, ನೌಕರ ಸಂಘದ ಅಧ್ಯಕ್ಷ ಸುರೇಶ್ ಇತರರಿದ್ದರು.