ಪೌರ ಕಾರ್ಮಿಕರ ಸೇವೆ ಅತ್ಯಮೂಲ್ಯ

klb5
ಕಾಳಗಿಯ ಪ್ರವಾಸಿ ಮಂದಿರದಲ್ಲಿ ಸೋಮವಾರ ಪಟ್ಟಣ ಪಂಚಾಯಿತಿಯಿAದ ಹಮ್ಮಿಕೊಂಡ ಪೌರಕಾರ್ಮಿಕರ ದಿನಾಚರಣೆಯಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಘಮಾವತಿ ರಾಠೋಡ್, ಪಂಕಜಾ ಆಂಜನೇಯ, ರಾಜೇಶ್ವರಿ, ರೇಣುಕಾದೇವಿ ಕಾಬಾ ಇತರರಿದ್ದರು.
Published on

ಕಾಳಗಿ: ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಪೌರ ಕಾರ್ಮಿಕರ ಪಾತ್ರ ಅತ್ಯಮೂಲ್ಯವಾಗಿದ್ದು, ಲೇಬರ್‌ಗಳು ಕೆಲಸದ ವೇಳೆ ಸುರP್ಷÀತಾ ಪರಿಕರಗಳನ್ನು ಧರಿಸಿ ಸ್ವ-ಆರೋಗ್ಯಕ್ಕೆ ಆದ್ಯತೆ ನೀಡಬೇಕು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಂಕಜಾ ಆಂಜನೇಯ ಹೇಳಿದರು.

ಪ್ರವಾಸಿ ಮಂದಿರದಲ್ಲಿ ಪಟ್ಟಣ ಪಂಚಾಯಿತಿಯಿAದ ಸೋಮವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿದ ಅವರು, ಪೌರಕಾರ್ಮಿಕರು ಸ್ಥಳೀಯ ಸಂಸ್ಥೆಗಳ ಆಧಾರ ಸ್ಥಂಭ ಮತ್ತು ಭೂ ಸೇನಾ ಸೈನಿಕರಿದ್ದಂತೆ. ಮಳೆ, ಚಳಿ, ಗಾಳಿ, ಗಲೀಜು ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಆರೋಗ್ಯ ಬದಿಗೊತ್ತಿ ಸ್ವಚ್ಛತಾ ಕಾರ್ಯ ಮಾಡುತ್ತಾರೆ. ಅವರ ಆರೋಗ್ಯ ಕಾಪಾಡುವ ಜವಾಬ್ದಾರಿ ಸ್ಥಳೀಯ ಆಡಳಿತ ಮತ್ತು ಸರ್ಕಾರಕ್ಕಿರುತ್ತದೆ. ಕುಟುಂಬದ ಜತೆಗೆ ಮಕ್ಕಳ ಶಿP್ಷÀಣದತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ತಹಸೀಲ್ದಾರ್ ಘಮಾವತಿ ರಾಠೋಡ್ ಮಾತನಾಡಿ, ಪೌರ ಕಾರ್ಮಿಕರು ಕಾಯಕ ಯೋಗಿಗಳಾಗಿದ್ದು, ಊರನ್ನು ಸ್ವಚ್ಛವಾಗಿಡುವ ಅವರ ಶ್ರಮಕ್ಕೆ ಬೆಲೆ ಕಟ್ಟಲಾಗದು. ನಿತ್ಯ ಪಟ್ಟಣ ಸ್ವಚ್ಛಗೊಳಿಸಿ, ಕಸ-ಕಡ್ಡಿಯನ್ನು ವಿಲೇವಾರಿ ಮಾಡುತ್ತಾರೆ. ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಪಟ್ಟಣದ ಸೌಂದರ್ಯಕ್ಕೆ ಧಕ್ಕೆ ಆಗುತ್ತಿದೆ. ಸಾರ್ವಜನಿಕರು ಪಟ್ಟಣದ ಸ್ವಚ್ಛತೆಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಕರೆ ನೀಡಿದರು.

ಗ್ರೇಡ್-2 ತಹಸೀಲ್ದಾರ್ ರಾಜೇಶ್ವರಿ, ಪಪಂ ಸಮುದಾಯ ಸಂಘಟನಾ ಅಧಿಕಾರಿ ರೇಣುಕಾದೇವಿ ಕಾಬಾ, ಕಂದಾಯ ನಿರೀP್ಷÀಕಿ ಫಾತೀಮಾ ಬೇಗಂ, ಎಫ್‌ಡಿಎ ರಾಧಿಕಾ ಕುಂಬಾರ, ಕಿರಿಯ ಆರೋಗ್ಯ ನೀರಿP್ಷÀಕ ಆನಂದ ಕಾಶಿ, ಸಿಬ್ಬಂದಿ ಉದಯಕುಮಾರ ಸಿಂಗಶೆಟ್ಟಿ, ಪ್ರಮುಖರಾದ ಸೈಯದ್ ಮಕ್ಸೂದ್ ಬೂಕಾರಿ, ಗಂಗಾಬಿಕಾ ಹಿರೇಮಠ, ಕಾಳೇಶ್ವರ ಮಡಿವಾಳ, ಅನೀಲಕುಮಾರ ಜಾಧವ್, ಅಭಿಷೇಕ ಗುತ್ತೇದಾರ್, ಸುಭಾಶಚಂದ್ರ ರಾಠೋಡ್, ಭರತ ಜಾಧವ್, ಮಹ್ಮದ್ ಸಾಜೀದ್, ಮಂಜುನಾಥ ಚೆಂಗಟಾ, ಲಕ್ಷ್ಮೀಬಾಯಿ, ಜಗದೇವಿ, ಲಕ್ಷ್ಮೀ, ಶಾರಮ್ಮ, ಸೋನಾಬಾಯಿ, ಗಂಗಿಮಾಳಮ್ಮ, ಅಂಬದಾಸ, ಉಸ್ಮಾನ್‌ಪಾಶಾ, ಕಾಶೀನಾಥ ಕಾಳೇರ, ಹಣಮಂತ ಚೌಡಗುಂಡಿ, ಅಶೋಕ, ಈಶ್ವರ, ಹಣಮಂತ, ವಿಠ್ಠಲ್, ಗೋವಿಂದ ಪೂಜಾರಿ ಇತರರಿದ್ದರು. ಪಪಂ ಪೌರ ಕಾರ್ಮಿಕರನ್ನು ಸನ್ಮಾನಿಸಿ, ಉಡುಗೊರೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net