ಪೌರ ಕಾರ್ಮಿಕರ ಮೇಲೆ ಕೇಸ್ ದಾಖಲು ಸಲ್ಲದು; ಉಪವಿಭಾಗಾಧಿಕಾರಿಗೆ ಮನವಿ

WEB SGRRR
Published on

ಸಾಗರ: ನಗರಸಭೆ ಪ್ರಭಾರ ಪೌರಾಯುಕ್ತ ಎಚ್.ಕೆ.ನಾಗಪ್ಪ ಮೇಲೆ ಹಲ್ಲೆಗೆ ಯತ್ನ ಹಾಗೂ ಪೌರಸೇವಾ ನೌಕರರ ಮೇಲೆ ದೂರು ದಾಖಲಿಸಿರುವುದನ್ನು ಖಂಡಿಸಿ ಶನಿವಾರ ತಾಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.

ಕೆಲವು ಸ್ಥಳೀಯ ಮುಖಂಡರು ಜನರ ಗುಂಪು ಕಟ್ಟಿಕೊಂಡು ನ.30ರಂದು ಪ್ರಭಾರ ಪೌರಾಯುಕ್ತರು ಮತ್ತು ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದನ್ನು ಸಂಘ ತೀವ್ರವಾಗಿ ಖಂಡಿಸುತ್ತದೆ. ಸರ್ಕಾರಿ ನೌಕರರು ತಮ್ಮ ಕರ್ತವ್ಯ ನಿರ್ವಹಿಸಿಕೊಂಡು ಹೋಗಲು ಯಾರೂ ಅಡ್ಡಿಪಡಿಸಬಾರದು. ತಮ್ಮ ಕರ್ತವ್ಯ ನಿರ್ವಹಣೆ ಮಾಡಿದ ಕೆಲವು ಪೌರಸೇವಾ ನೌಕರರ ಮೇಲೆ ಮೊಕದ್ದಮೆ ದಾಖಲಿಸುವ ಮೂಲಕ ಅವರ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನ ನಡೆಸಿದ್ದು ಸರಿಯಲ್ಲ. ತಕ್ಷಣ ಅವರ ಮೇಲೆ ಹಾಕಿರುವ ಎಲ್ಲ ಕೇಸುಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಸಂಘದ ಅಧ್ಯಕ್ಷ ಜಿ.ಪರಮೇಶ್ವರಪ್ಪ ಒತ್ತಾಯಿಸಿದರು.

ಏನೇ ಸಮಸ್ಯೆ ಇದ್ದರೂ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಮಾರ್ಗಗಳಿವೆ. ಅದನ್ನು ಬಿಟ್ಟು ಹಲ್ಲೆ ಯತ್ನ, ಕರ್ತವ್ಯಕ್ಕೆ ಅಡ್ಡಿಪಡಿಸುವಂತಹ ಕ್ರಮ ಸರಿಯಲ್ಲ. ಮುಂದೆ ಇಂತಹ ಘಟನೆ ನಡೆದರೆ ಸಂಘ ಪ್ರತಿಭಟನೆ ಮೂಲಕ ಅಧಿಕಾರಿ, ನೌಕರರಿಗೆ ಎಲ್ಲ ರೀತಿಯ ಬೆಂಬಲ ನೀಡಿ ನ್ಯಾಯ ದೊರಕಿಸಿಕೊಡುವ ಪ್ರಯತ್ನ ನಡೆಸಲಿದೆ. ಸರ್ಕಾರಿ ಅಧಿಕಾರಿ ನೌಕರರು ಸಹ ಸಾರ್ವಜನಿಕರ ಕೆಲಸವನ್ನು ತಕ್ಷಣ ಮಾಡಿಕೊಡುವತ್ತ ಗಮನ ಹರಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net