ಪೌರ ಕಾರ್ಮಿಕರ ದಿನಾಚರಣೆ: ಶ್ರಮಜೀವಿಗಳಿಗಾಗಿ ಕ್ರೀಡಾಕೂಟ

SKP web 222
Published on

ಶಿಕಾರಿಪುರ: ಸ್ವಚ್ಛ, ಸುಂದರ ಶಿಕಾರಿಪುರ ನಿರ್ಮಾಣವಾಗಲು ಪೌರಕಾರ್ಮಿಕರು ಕಾರಣ. ಅವರ ಶ್ರಮದಿಂದ ಇಡೀ ಪಟ್ಟಣ ತ್ಯಾಜ್ಯ ಮುಕ್ತವಾಗಿದೆ ಎಂದು ಪುರಸಭೆ ಅಧ್ಯಕ್ಷೆ ರೇಖಾಬಾಯಿ ಮಂಜುಸಿಂಗ್ ಹೇಳಿದರು.

ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಶನಿವಾರ ಆಯೋಜಿಸಿದ್ದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಪೌರ ಕಾರ್ಮಿಕರು ನಮ್ಮ ಹೆಮ್ಮೆ ಮತ್ತು ನಮ್ಮ ಆಸ್ತಿ. ಅವರ ನಿಸ್ವಾರ್ಥ ಸೇವೆಯನ್ನು ಸ್ಮರಿಸುವ ದಿನವಿದು. ಕಸದೊಂದಿಗೆ ಬದುಕು ಸವೆಸುವ ಈ ನಾಡಿನ ಕಷ್ಟಜೀವಿಗಳು ಅವರು. ಅವರಿಗೆ ನಮ್ಮ ಅನುಕಂಪಕ್ಕಿಂತ ನೆರವು ಅಗತ್ಯ ಎಂದರು.

ಪೌರ ಕಾರ್ಮಿಕರು ಮೊದಲು ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಸ್ವಚ್ಛತಾ ಕಾರ್ಯದ ವೇಳೆ ರಕ್ಷಣೆಗಾಗಿ ಸರ್ಕಾರ ನೀಡಿದ ಸಲಕರಣೆಗಳನ್ನು ಕಡ್ಡಾಯವಾಗಿ ಬಳಸಬೇಕು. ನಿಮ್ಮ ಹಿಂದೆ ನಿಮ್ಮನ್ನೇ ನಂಬಿದ ಕುಟುಂಬವಿದೆ ಎಂದು ಎಚ್ಚರಿಸಿದರು.

ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net