

ಮಂಗಳೂರು: ಮಹಾನಗರ ಪಾಲಿಕೆಯ ವತಿಯಿಂದ ಉರ್ವಸ್ಟೋರ್ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಪೌರಕಾರ್ಮಿಕರ ದಿನಾಚರಣೆ ನಡೆಯಿತು.
ಮೇಯರ್ ಜಯಾನಂದ್ ಅಂಚನ್ ಕಾರ್ಯಕ್ರಮ ಉದ್ಘಾಟಿಸಿ, ಶುಭ ಹಾರೈಸಿದರು. ನಿವೃತ್ತ ಪೌರಕಾರ್ಮಿಕರು ಹಾಗೂ ಉತ್ತಮ ಸಾಧನೆಗೈದ ಪೌರಕಾರ್ಮಿಕರ ಮಕ್ಕಳನ್ನು ಸನ್ಮಾನಿಸಲಾಯಿತು.
ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಪಾಲಿಕೆ ಸದಸ್ಯೆ ಜಯಲಕ್ಷ್ಮೀ ಶೆಟ್ಟಿ, ಪಾಲಿಕೆ ಆಯುಕ್ತ ಅಕ್ಷಿ ಶ್ರೀಧರ್, ಮಾಜಿ ಉಪ ಮೇಯರ್ ಸುಮಂಗಳ ಹಾಗೂ ಸದಸ್ಯರಾದ ಕಿರಣ್ ಕುಮಾರ್, ಗಣೇಶ್, ಶೈಲೇಶ್ ಶೆಟ್ಟಿ, ಭಾನುಮತಿ, ಮನೋಜ್ ಕುಮಾರ್, ಸುಮಿತ್ರ, ಹೇಮಲತಾ ರಘು ಸಾಲಿಯಾನ್, ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ, ಪೌರ ಕಾರ್ಮಿಕ ಸಂಘದ ಅಧ್ಯಕ್ಷ ಅನಿಲ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.