

ಮಂಡ್ಯ: ಜನರು ತಮ್ಮ ಸಮಸ್ಯೆಗಳನ್ನು ನೇರವಾಗಿ ಇಲಾಖೆಯ ಅಧಿಕಾರಿಗಳೊಂದಿಗೆ ತಿಳಿಸಿ ಬಗೆಹರಿಸಿಕೊಳ್ಳಲು ಮುಂದಾಗಿ ಎಂದು ತಹಸೀಲ್ದಾರ್ ನಿಸರ್ಗಪ್ರಿಯಾ ತಿಳಿಸಿದರು.
ಪಟ್ಟಣದ ನಾಡಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಪೌತಿಖಾತೆ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿ, ಹೋಬಳಿಯಲ್ಲಿ ಒಟ್ಟು 12 ವೃತ್ತಗಳಿವೆ. ಗ್ರಾಮ ಲೆಕ್ಕಿಗರು ತಮ್ಮ ಸಮಸ್ಯೆಗಳನ್ನು ಪಟ್ಟಿಮಾಡಿ ತಮ್ಮ ಮೂಲ ಕುಟುಂಬದವರು ಮರಣ ಹೊಂದಿರುವ ಮಾಹಿತಿ ನೀಡಲಿದ್ದಾರೆ.
ಜಮೀನಿನ ಮೂಲ ವಾರಸುದಾರರು ಮರಣಹೊಂದಿದಾಗ ಇವರ ಹೆಸರಿನಲ್ಲಿಯೆ ಆರ್‌ಟಿಸಿ, ಖಾತೆ ಎಲ್ಲವೂ ಇರುವುದರಿಂದ 11- ಇ ಸ್ಕೆಚ್, ಮಾರಾಟ ಮಾಡಲು ರೈತರಿಗೆ ಸಾಲ, ಬ್ಯಾಂಕ್ ವಹಿವಾಟು, ಅನುದಾನ ಪಡೆಯಲು ವಂಚಿತರಾಗುತ್ತಿದ್ದಾರೆ. ಈ ದೃಷ್ಟಿಯಲ್ಲಿ ತಾಲೂಕಿನ ಎಲ್ಲ ಹೋಬಳಿಯಲ್ಲಿಯೂ ಪೌತಿಖಾತೆ ಆಂದೋಲನ ನಡೆಸಲಾಗುತ್ತಿದೆ ಎಂದರು.
ಪೌತಿ ಖಾತೆ, ಆರ್‌ಟಿಸಿ ತಿದ್ದುಪಡಿಗಾಗಿ 70ಕ್ಕೂ ಹೆಚ್ಚು ರೈತರು ಅರ್ಜಿ ಸಲ್ಲಿಸಿದರು. ಉಪತಹಸೀಲ್ದಾರ್ ವೀಣಾ, ರಾಜಸ್ವ ನಿರೀಕ್ಷಕ ಗೋಪಾಲಕೃಷ್ಣ, ಗ್ರಾಪಂ. ಅಧ್ಯಕ್ಷೆ ತಾಯಮ್ಮ, ಪಿಡಿಒ ಚಲುವರಾಜ್, ಗ್ರಾಮ ಲೆಕ್ಕಿಗ ಕೆ.ಎಸ್.ಸೋಮಾಚಾರ್, ಕೆ.ಎಸ್. ಸೋಮಾಚಾರ್, ಶಶಿಕುಮಾರ್ ಮಡ್ಡಿ, ಪ್ರಸನ್ನ, ಕಾಂತೇಶ್ ಭಾಗೋಡಿ, ತಿಪ್ಪೇಶ್, ವನಜಾಕ್ಷಿ, ಪರಿಮಳಾ ಇದ್ದರು.