ಪೌತಿ ಖಾತೆ ಆಂದೋಲನ

ಪೌತಿ ಖಾತೆ ಆಂದೋಲನ
Published on


ಅರಕಲಗೂಡು: ತಾಲೂಕಿನ ಕಸಬಾ ಹೋಬಳಿಯ ವಿವಿಧ ಗ್ರಾಮಗಳಿಗೆ ತಹಸೀಲ್ದಾರ್ ಕೆ.ಆರ್. ಶ್ರೀನಿವಾಸ್ ಬುಧವಾರ ಭೇಟಿ ನೀಡಿ ಪೌತಿ ಖಾತೆ ಆಂದೋಲನ ನಡೆಸಿ ಜನರ ಕುಂದು ಕೊರತೆಗಳನ್ನು ಆಲಿಸಿದರು.


ಹೆಬ್ಬಾಲೆ, ಹೆಬ್ಬಾಲೆ ಕಾಲನಿ, ಹೆಬ್ಬಾಲೆ ಕೊಪ್ಪಲು, ನರಸಿನಕುಪ್ಪೆ ಕಾಲನಿಗೆ ಭೇಟಿ ನೀಡಿದ ತಹಸೀಲ್ದಾರ್ ಶ್ರೀನಿವಾಸ್ ಅವರು ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್, ಪಹಣಿ ಜೋಡಣೆ, ವಸತಿ ಸಮಸ್ಯೆ ಕುರಿತು ಜನರ ಕುಂದು ಕೊರತೆಗಳನ್ನು ಆಲಿಸಿ ಮಾಹಿತಿ ಪಡೆದರು.


ಗ್ರಾಮ ಲೆಕ್ಕಾಧಿಕಾರಿ ವಿನಾಯಕ್ ಹಿರೇಮಠ್, ಪುಟ್ಟರಾಜು, ಗ್ರಾಮ ಸಹಾಯಕ ನವೀನ್ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net