

ಹುಬ್ಬಳ್ಳಿ: ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೆ ಒತ್ತಾಯಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯಲಿರುವ ಹಿನ್ನೆಲೆಯಲ್ಲಿ ನಗರದ ಕಿಮ್ಸ್ನಲ್ಲಿ ಶನಿವಾರ ಪೋಸ್ಟರ್ ಬಿಡುಗಡೆ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಲಾಯಿತು.
ಕೆಲ ರಾಜ್ಯಗಳಲ್ಲಿ ಒಪಿಎಸ್ ಜಾರಿಗೆ ತರಲಾಗಿದೆ. ನಮ್ಮ ರಾಜ್ಯದ ಸರ್ಕಾರಿ ಎನ್ಪಿಎಸ್ ನೌಕರರಿಗೆ ಜಾರಿಗೊಳಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಡಿ. 19ರಿಂದ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಯಲಿದೆ. ನಾವೆಲ್ಲರೂ ಇದಕ್ಕೆ ಬೆಂಬಲ ಸೂಚಿಸಿದ್ದೇವೆ ಎಂದು ರಾಜ್ಯ ಸರ್ಕಾರಿ ಎನ್ಪಿಎಸ್ ನೌಕರರ ಸಂಘ, ಕಿಮ್ಸ್ನ ಎನ್ಪಿಎಸ್ ನೌಕರರ ಒಕ್ಕೂಟದ ಪದಾಧಿಕಾರಿಗಳು ತಿಳಿಸಿದರು.
ರಾಜ್ಯ ಸರ್ಕಾರಿ ಎನ್ಪಿಎಸ್ ನೌಕರರ ಸಂಘದ ಜಿಲ್ಲಾಧ್ಯಕ್ಷ ಯಲ್ಲಪ್ಪ ಕರೆಣ್ಣವರ, ಫಿರೋಜ ಗುಡೇನಕಟ್ಟಿ, ಕಿಮ್್ಸ ವೈದ್ಯರ ಸಂಘದ ಅಧ್ಯಕ್ಷ ಡಾ. ಸುರೇಶ ಹುಚ್ಚಣ್ಣವರ, ಡಾ. ಮಂಜುನಾಥ ನೇಕಾರ, ಡಾ.ಎಸ್.ಎಸ್. ಶಿರೋಳ, ಡಾ. ಶಕ್ತಿ ಪ್ರಸಾದ ಹಿರೇಮಠ, ಡಾ. ಆನಂದ ವರ್ವ, ಇತರರಿದ್ದರು.