ಪೋಸ್ಟರ್ ತಯಾರಿಕಾ ಸ್ಪರ್ಧೆ

14-kgl-2,
Published on

ಕೊಳ್ಳೇಗಾಲ: ಪಟ್ಟಣದ ಜೆಎಸ್‌ಎಸ್ ನರ್ಸಿಂಗ್ ಶಾಲೆಯಲ್ಲಿ ಬುಧವಾರ ಅಂತಾರಾಷ್ಟ್ರೀಯ ಶುಶ್ರೂಷಕರ ದಿನಾಚರಣೆಯ ಪ್ರಯುಕ್ತ ದಾದಿಯರ ಸೇವೆಯ ಮಹತ್ವವ ಕುರಿತು ಅಂತರ ಕಾಲೇಜು ಪೋಸ್ಟರ್ ತಯಾರಿಕಾ ಸ್ಪರ್ಧೆ ಆಯೋಜಿಸಲಾಗಿತ್ತು.

ಕೊಳ್ಳೇಗಾಲ ನರ್ಸಿಂಗ್ ಶಾಲೆಯ ಪ್ರಾಂಶುಪಾಲ ಹೇಮೇಶ ಮೂರ್ತಿ ಮಾತನಾಡಿ, ನಮ್ಮ ದಾದಿಯರು ನಮ್ಮ ಭವಿಷ್ಯ. ದಾದಿಯರ ಕಾಳಜಿಯಿಂದ ನಮ್ಮ ಆರ್ಥಿಕತೆ ಬಲಗೊಳ್ಳುತ್ತದೆ. ಈ ವಾಕ್ಯ ದಾದಿಯರ ಆರೋಗ್ಯ ಮತ್ತು ಯೋಗ ಕ್ಷೇಮ ಕೇಂದ್ರೀಕರಿಸುತ್ತದೆ. ಒಟ್ಟಾರೆ ಆರೋಗ್ಯ ವ್ಯವಸ್ಥೆಯನ್ನು ಬೆಂಬಲಿಸುವಲ್ಲಿ ಆರೋಗ್ಯಕರ ಶುಶ್ರೂಷಕ ಕಾರ್ಯಪಡೆ ನಿರ್ಣಾಯಕ ಪಾತ್ರ ತೋರಿಸುತ್ತದೆ. ಹಾಗಾಗಿ ಇಂದು ಕೊಳ್ಳೇಗಾಲ ನರ್ಸಿಂಗ್ ಶಾಲೆಯಲ್ಲಿ ದಾದಿಯರ ಪ್ರಾಮುಖ್ಯ ಕುರಿತು ಪೋಸ್ಟರ್ ತಯಾರಿಕಾ ಸ್ಪರ್ಧೆ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ಈ ಧ್ಯೇಯ ವಾಕ್ಯ ಕುರಿತ ಸ್ಪರ್ಧೆಯಲ್ಲಿ ಚಾಮರಾಜನಗರ ಜೆಎಸ್‌ಎಸ್ ನರ್ಸಿಂಗ್ ಶಾಲೆ, ಚಾಮರಾಜನಗರ ಬಸವರಾಜೇಂದ್ರ ನರ್ಸಿಂಗ್ ಶಾಲೆ, ಕಾಮಗೆರೆ ಹೊಲಿಕ್ರಾಸ್ ನರ್ಸಿಂಗ್ ಶಾಲೆ, ಸುಪ್ರಿಂ ನರ್ಸಿಂಗ್ ಶಾಲೆ, ಕೊಳ್ಳೇಗಾಲ ನರ್ಸಿಂಗ್ ಶಾಲೆಯ 20 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಚಾಲಕ ಎ.ಸಿ ನವೀನ್‌ಕುಮಾರ್, ಬಿ.ಪಿ.ಕಾವ್ಯಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net