ಪೋಲಿಯೋ ಜಾಗೃತಿ ಪೋಸ್ಟರ್‌ಗಳ ಅಳವಡಿಕೆ

24mdk04
Published on

ಮಡಿಕೇರಿ: ವಿಶ್ವ ಪೋಲಿಯೋ ನಿರ್ಮೂಲನಾ ದಿನದ ಅಂಗವಾಗಿ ರೋಟರಿ ಮಡಿಕೇರಿ ವುಡ್ಸ್ ವತಿಯಿಂದ ನಗರದ ಹಲವಾರು ಕಡೆಗಳಲ್ಲಿ ಶುಕ್ರವಾರ ಪೋಲಿಯೋ ನಿರ್ಮೂಲನೆ ಸಂದೇಶದ ಪೋಸ್ಟರ್‌ಗಳನ್ನು ಅಳವಡಿಸಲಾಯಿತು.

ನಗರಸಭೆ ಮುಂಭಾಗ ಪೋಸ್ಟರ್ ಅಭಿಯಾನಕ್ಕೆ ನಗರಸಭಾಧ್ಯಕ್ಷೆ ಕಲಾವತಿ ಚಾಲನೆ ನೀಡಿದರು. ಪ್ರತಿ ಮನೆಯಲ್ಲಿಯೂ ಎರಡರಿಂದ ಆರು ವರ್ಷದ ಒಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದರು. ರೋಟರಿ ವುಡ್ಸ್ ವತಿಯಿಂದ ಸಾರ್ವಜನಿಕರಲ್ಲಿ ಜಾಗೃತಿ ಉಂಟು ಮಾಡುವ ಈ ವಿನೂತನ ಅಭಿಯಾನವನ್ನು ಶ್ಲಾಘಿಸಿದರು.

ವಿಶ್ವದಾದ್ಯಂತ ಪೋಲಿಯೋ ನಿರ್ಮೂಲನೆಯಲ್ಲಿ ಅಂತಾರಾಷ್ಟ್ರೀಯ ಸೇವಾ ಸಂಸ್ಥೆಯಾದ ರೋಟರಿ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದು, ಲಕ್ಷಾಂತರ ಮಕ್ಕಳು ವಿಶೇಷಚೇತನರಾಗುವುದನ್ನು ಪೋಲಿಯೋ ನಿರೋಧಕ ಲಸಿಕೆ ಮೂಲಕ ರೋಟರಿ ತಪ್ಪಿಸಿದೆ ಎಂದು ರೋಟರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದರ್ ಮಾಹಿತಿ ನೀಡಿದರು. ಜನರಲ್ಲಿ ಜಾಗೃತಿ ಉಂಟು ಮಾಡುವ ನಿಟ್ಟಿನಲ್ಲಿ ರೋಟರಿ ವುಡ್ಸ್ ವತಿಯಿಂದ ನಗರವ್ಯಾಪ್ತಿಯಲ್ಲಿ ಜಾಗೃತಿ ಸಂದೇಶದ ಪೋಸ್ಟರ್, ಬ್ಯಾನರ್ ಅಳವಡಿಸಲಾಗಿದೆ ಎಂದೂ ಕಿರಣ್ ಹೇಳಿದರು.

ರೋಟರಿ ವುಡ್ಸ್ ಕಾರ್ಯದರ್ಶಿ ಪ್ರಮೀಳಾ ಶೆಟ್ಟಿ, ನಿರ್ದೇಶಕರಾದ ಕೆ. ವಸಂತ್ ಕುಮಾರ್, ಧನಂಜಯ ಶಾಸ್ತ್ರಿ, ಪಿ. ರವಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net