ಪೋಟೋಕ್ಕಿದೆ ಇತಿಹಾಸ ತಿಳಿಸುವ ಶಕ್ತಿ

19BK1
ಬಸವಕಲ್ಯಾಣದಲ್ಲಿ ಆಯೋಜಿಸಿದ್ದ ೧೮೬ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದು ಪಾಸಾದ ಫೋಟೋಗ್ರಾಫರ್ ಮಕ್ಕಳನ್ನು ಸನ್ಮಾನಿಸಲಾಯಿತು, ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಪವನ್‌ಸಿಂಗ್ ಠಾಕೂರ್, ದಿನೇಶ ಗೊಂಟಲ್, ವಿನೋದ ಜಾಧವ್ ಇತರರಿದ್ದರು.
Published on

ಬಸವಕಲ್ಯಾಣ: ನೆನಪುಗಳನ್ನು ಉಳಿಸುವ, ಇತಿಹಾಸವನ್ನು ತಿಳಿಸುವ ಜತೆಗೆ ಒಳ್ಳೆಯ ಕಾರ್ಯಕ್ಕೆ ಸ್ಪೂರ್ತಿ ನೀಡುವ ಶಕ್ತಿ ಫೋಟೀಕ್ಕಿದೆ. ಸಾಮಾಜಿಕ ಜವಾಬ್ದಾರಿಯಿಂದ ಕೂಡಿದ ಫೋಟೋಗ್ರಾಫರ್ ವೃತ್ತಿ ಅತ್ಯಂತ ಮಹತ್ವದ್ದಾಗಿದೆ ಎಂದು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಹೇಳಿದರು.

ನಗರದ ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ತಾಲೂಕು ಫೋಟೋಗ್ರಾಪರ್ ಅಸೋಸಿಯೇಷನ್‌ನಿಂದ ಆಯೋಜಿಸಿದ್ದ ೧೮೬ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮುಂದಿನ ಐತಿಹಾಸಿಕ ಕೋಟೆ, ಮುಂದಿನ ವರ್ಷಗಳಲ್ಲಿ ಸ್ವಾರಕ ಸ್ಥಳಗಳಲ್ಲಿ ದಿನ ಆಚರಿಸುವ ಮೂಲಕ ನಮ್ಮ ಇತಿಹಾಸ ಮತ್ತು ಸಂಸ್ಕೃತಿ ಎತ್ತಿ ಹಿಡಿವ ಕೆಲಸ ನಡೆಯಲಿ ಎಂದು ಸಲಹೆ ನೀಡಿದರು.

ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಪವನ್‌ಸಿಂಗ್ ಠಾಕೂರ್ ಮಾತನಾಡಿ, ಸ್ಟುಡಿಯೋದಲ್ಲಿ ದರ ಫಲಕ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಘೋಟೋಗ್ರಾಫರ್‌ಗಳಿಗೆ ಐಡಿ ಕಾರ್ಡ್ ಕಡ್ಡಾಯವಾಗಿದ್ದು, ಎಲ್ಲರೂ ಇದನ್ನು ಮಾಡಿಸಿಕೊಳ್ಳಬೇಕು. ಜತೆಗೆ ತಮ್ಮದೇ ಆದ ಸಮವಸ್ತç ರೂಪಿಸಿಕೊಳ್ಳಬೇಕು. ಶಿಸ್ತು ಪಾಲಿಸಬೇಕು ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಸಂಸ್ಥಾನ ಗವಿಮಠದ ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡಿದರು.

ಅಸೋಸಿಯೇಷನ್ ತಾಲೂಕು ಅಧ್ಯಕ್ಷ ದಿನೇಶ ಗೊಂಟಲ್ ಅಧ್ಯಕ್ಷತೆ ವಹಿಸಿದ್ದರು, ಸೀತಲ್ ಎಂ.ಖೂಬಾ, ಜಿಲ್ಲಾ ಉಪಾಧ್ಯಕ್ಷ ನಿಸಾರ್ ಅಹ್ಮದ್, ಉಪಾಧ್ಯಕ್ಷ ವಿನೋದ ಜಾಧವ್, ಜಿಲ್ಲಾ ಉಸ್ತುವಾರಿ ರವಿರಾಜ್ ಆರ್., ವಿವಿಧ ತಾಲೂಕುಗಳ ಅಧ್ಯಕ್ಷರಾದ ಸತೀಶ ಮಲೋದೆ, ಅಂಜನ್‌ಕುಮಾರ, ಇಮ್ರಾನ್ ಪಟೇಲ್, ಮಂಜುನಾಥ ಭಾಲ್ಕಿ ಚಂದ್ರಕಾಂತ ಚಿಡಗುಪ್ಪಾ , ಶಿವಕುಮಾರ ಬಿರಾದಾರ, ಸ್ಥಳಿಯ ಘಟಕದ ಖಜಾಂಚಿ ನಾಗೇಶ ಕುಲ್ಕರ್ಣಿ, ರೂಪೇಶ ಗೊಂಟಲ್, ಸೋಮನಾಥ ಪೀರ್ಜೆ, ಸೈಯದ್ ಅಕ್ಬರಲಿ, ಅಸ್ಲಮ್ ಖಾದಿವಾಲೆ, ದತ್ತಾ ಗವಳಿ, ದೀಪಕ ಸಾಯಬನೆ, ಶಿರಾಜೋದ್ದಿನ್, ಗುರುಲಿಂಗಯ್ಯ ಮಠ, ಶರಣಯ್ಯ ಸ್ವಾಮಿ, ಶಿವರಾಜ ಮೇಕಾಲೆ, ಶಿವಕುಮಾರ ಮುಳೆ, ಅಮರ ಬೆಂಬಳಗೆ, ಕೈಲಾಸ ರಾಜೇಶ್ವರ, ನಬಿಸಾಬ ಭೋಸಗಾ ಇದ್ದರು.

ಪ್ರಧಾನ ಕಾರ್ಯದರ್ಶಿ ರಾಮಲಿಂಗ ಪಾಟೀಲ್ ಸ್ವಾಗತಿಸಿದರು. ಸದಸ್ಯರಾದ ಪ್ರದೀಪ ಭುರಳೆ ಪ್ರಾಸ್ತಾವಿಕ ಮಾತನಾಡಿದರು. ಕಲಾವಿದ ರಾಹುಲ ತುತಾರೆ ನಿರೂಪಣೆ ಮಾಡುವ ಜತೆಗೆ ಮಧುರ ಕಂಠದಲ್ಲಿ ಕನ್ನಡ ಚಿತ್ರಗೀತೆ ಹಾಡಿ ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದು ಫೋಟೋಗ್ರಾಫರ್ ಮಕ್ಕಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.

ಫೋಟೋಗ್ರಾಫರ್ ವೃತ್ತಿ ಅತ್ಯಂತ ಮಹತ್ವದ್ದಾಗಿದೆ. ಕ್ಯಾಮೆರಾದಲ್ಲಿ ಸೆರೆಯಾದ ಒಳ್ಳೆಯ ಚಿತ್ರಗಳಿಗೆ ಬೆಲೆ ಕಟ್ಟಲಾಗದು. ಸಾವಿರ ಶಬ್ದಗಳಿಗೆ ಹೇಳಲಾಗದ್ದು ಒಂದು ಫೋಟೋ ತಿಳಿಸಿಕೊಡುತ್ತದೆ. ಇತಿಹಾಸವನ್ನು ನೆನಪಿಸುವ ಶಕ್ತಿ ಇದಕ್ಕಿದೆ. ಹಲವು ಪ್ರಕರಣಗಳಲ್ಲಿ ಸಾಕ್ಷಿಯಾಗಿಯೂ ಪರಿಗಣಿಸಲಾಗುತ್ತದೆ.

| ಶ್ರೀ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಸಂಸ್ಥಾನ ಗವಿಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net