ಪೋಟೊ ಗ್ರಾಫರ್ ಕೊಲೆ

images-07
Published on

ಹೊಳಲ್ಕೆರೆ:ಹೊಳಲ್ಕೆರೆ ತಾಲೂಕು ಶಿವಗಂಗಾ ಗ್ರಾಮದಲ್ಲಿ ಶುಕ್ರವಾರ ರಾತ್ರಿ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಇರಿದು ಕೊಲೆ ಮಾಡಿ ದ್ದಾರೆ. ಮೃತನನ್ನು ಗ್ರಾಮದ ಪೋಟೊಗ್ರಾಫರ್ ಬಸವರಾಜ(35)ಎಂದು ಗುರುತಿಸಲಾಗಿದೆ.

ಮನೆಯಲ್ಲಿ ಒಬ್ಬನೇ ಮಲಗಿದ್ದ ಬಸವರಾಜ ನನ್ನು ದುಷ್ಕರ್ಮಿಗಳು ಹರಿತವಾದ ಆಯುಧದಿಂದ,ಆತನ ಮುಖ ಹಾಗೂ ತಲೆ ಹಿಂಬದಿ ಇರಿದು ಕೊಲೆ ಮಾಡಿದ್ದಾರೆ. ಮೃತನ ಅಕ್ಕ ರಾಧ ಮ್ಮ ಬೆಳಗ್ಗೆ ಮನೆಗೆ ಬಂದ ನೋಡಿದಾಗ ತಮ್ಮ ಕೊಲೆಯಾಗಿರುವ ವಿಷಯ ಗೊತ್ತಾಗಿದೆ. ಪ್ರಕರಣ ದಾಖಲಿಸಿರುವ ಚಿತ್ರಹಳ್ಳಿಗೇಟ್ ಪೊಲೀ ಸರು ತನಿಖೆ ಮುಂದುವರಿಸಿದ್ದಾರೆ.

-----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net