ಪೋಕ್ಸೋ ಅಪರಾಧಿಗೆ 20 ವರ್ಷ ಜೈಲು

Published on

ಹುಳಿಯಾರು: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ದೊಡ್ಡಬಿದರೆ ಹೊಸಹಟ್ಟಿ ತಾಂಡಾದ ದರ್ಶನ್​ಗೆ 20 ವರ್ಷಗಳ ಜೈಲು ಶಿಕ್ಷೆ ಹಾಗೂ 2,50,000 ರೂ. ದಂಡ ವಿಧಿಸಿ ತುಮಕೂರು ಜಿಲ್ಲಾ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. 2022ರಲ್ಲಿ ತಾಂಡಾದ ಅಶೋಕ್​ ನಾಯ್ಕ ಅಲಿಯಾಸ್​ ಗಣೇಶ (24) ಹಾಗೂ ವರದಾ ಪುರದ ಕಟ್ಟೆ ದರ್ಶನ(26) ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎನ್ನಲಾಗಿತ್ತು. ಈ ಬಗ್ಗೆ ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ 1ನೇ ಆರೋಪಿ ಅಶೋಕ್​ ನಾಯ್ಕ ವಿರುದ್ಧದ ಆರೋಪಕ್ಕೆ ಸಾಗಳ ಕೊರತೆಯಾಗಿದ್ದು,

2ನೇ ಆರೋಪಿ ದರ್ಶನ್​ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ತೀರ್ಪು ನೀಡಿದೆ. ಪೊಲೀಸ್​ ವೃತ್ತ ನಿರೀಕ್ಷಕಿ ವಿ.ನಿರ್ಮಲಾ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿದ್ದರು. ವಿಶೇಷ ಸರ್ಕಾರಿ ಅಭಿಯೋಜಕಿ ಕೆ.ಎಸ್​.ಆಶಾ ಕೆ.ಎಸ್​ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net