

ಲಕ್ಷ್ಮೇಶ್ವರ: ಪಟ್ಟಣದ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಗಿರೀಶ ಮರಡ್ಡಿ ನೇತೃತ್ವದಲ್ಲಿ ಮಂಗಳವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿಯ ಆರೋಗ್ಯ ತಪಾಸಣೆ ಮಾಡಲಾಯಿತು.
ಡಾ. ಗಿರೀಶ ಮರಡ್ಡಿ ಮಾತನಾಡಿ, ಕರೋನಾ ವೈರಸ್ ಹರಡದಂತೆ ತಡೆಯಲು ಸರ್ಕಾರ ಲಾಕ್ಡೌನ್ ಘೊಷಣೆ ಮಾಡಿದಂದಿನಿಂದ ಪೊಲೀಸ್ ಸಿಬ್ಬಂದಿ ಹಗಲೂ-ರಾತ್ರಿ ಸೇವೆ ಸಲ್ಲಿಸುತ್ತಿದ್ದಾರೆ. ಕರೊನಾ ವೈರಸ್ಗೆ ಮನೆಯಲ್ಲಿಯೇ ಇರುವುದು ಮದ್ದು. ಆದರೆ, ಪೊಲೀಸರು, ಆರೋಗ್ಯ, ಪೌರಕಾರ್ವಿುಕರು ಮತ್ತು ಮಾಧ್ಯಮದವರಿಗೆ ಇದು ಅನ್ವಯಿಸುವುದಿಲ್ಲ. ಅವರಿಗೂ ಎಲ್ಲರಂತೆ ಕುಟುಂಬ, ಮಕ್ಕಳು ಇರುತ್ತಾರೆ. ಅವರ ಆರೋಗ್ಯವೂ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಕರೊನಾ ವಿರುದ್ಧ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಎಲ್ಲ ಇಲಾಖೆಗಳ ಸಿಬ್ಬಂದಿಯ ಆರೋಗ್ಯ ಕಾಪಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.
ಸಿಪಿಐ ಆರ್.ಎಚ್. ಕಟ್ಟಿಮನಿ ಮಾತನಾಡಿ, ಸಾರ್ವಜನಿಕರು ಮನೆಯಲ್ಲಿದ್ದು ಕರೊನಾ ಹೆಮ್ಮಾರಿಯನ್ನು ತಡೆಗಟ್ಟಲು ಸಹಕಾರ ನೀಡಬೇಕು ಎಂದರು.
ಡಾ. ನಿರ್ಮಲಾ ಕನ್ನಾಳ, ಶಕುಂತಲಾ ನಾಗರಡ್ಡಿ, ಪಿಎಸ್ಐ ಶಿವಯೋಗಿ ಲೋಹಾರ, ಅಪರಾಧ ವಿಭಾಗದ ಪಿಎಸ್ಐ ಪಿ.ಎಂ. ಬಡಿಗೇರ, ಪ್ರೊಬೇಷನರಿ ಪಿಎಸ್ಐ ಎಸ್.ಎಸ್. ಕಾರಜೋಳ, ಎಎಸ್ಐ ಶಂಕರ ಬೆಟಗೇರಿ, ಇತರರಿದ್ದರು.